ಮಡಿಕೇರಿ, ಏ. ೨೮: ಮತದಾರರ ಸೇವೆ ಮಾಡಲು ಒಂದು ಅವಕಾಶ ನೀಡಿ, ತಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥÀರ್ ಗೌಡ ಮಡಿಕೇರಿಯ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ಸಂತೆಯ ದಿನ ಮಡಿಕೇರಿಯ ಮುಖ್ಯ ಬೀದಿ ಬೀದಿಗಳಲ್ಲಿ ಅಂಗಡಿ ಮುಗ್ಗಟ್ಟು, ಮನೆ, ಮನೆಗಳಿಗೆ ಕಾರ್ಯಕರ್ತರೊಂದಿಗೆ ತೆರಳಿ ಮತಯಾಚನೆ ಮಾಡಿದರು.

ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಈ ನಿಟ್ಟಿನಲ್ಲಿ ಮಂಥರ್ ಅವರ ಗೆಲುವು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ ಜಿಲ್ಲೆಯಲ್ಲಿ ಜನ ಬದಲಾವಣೆ ಬಯಸಿದ್ದು, ಅದಕ್ಕೆ ಕಾರಣ ಬಿಜೆಪಿ ಶಾಸಕರ ಆಡಳಿತ ವೈಫಲ್ಯ ಎಂದು ಹೇಳಿದರು. ಮಡಿಕೇರಿ ನಗರದ ಜನತೆಗೆ ಸಮರ್ಪಕ ನೀರಿನ ವ್ಯವಸ್ಥೆ ಮಾಡದೇ ಇರುವುದು. ೨೦೧೮ ರಲ್ಲಿ ಪ್ರಕೃತಿ ವಿಕೋಪದ ಪರಿಹಾರ ಕಾರ್ಯಕ್ರಮಗಳನ್ನು ಬದಲಾಯಿಸಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಅಲಂಕಾರಿಕ ತಡೆಗೋಡೆ ನಿರ್ಮಾಣ, ಡಿ.ಸಿ. ಕಚೆೆÃರಿ ತಡೆಗೋಡೆ ಕಳಪೆ ಕಾಮಗಾರಿಗಳು ಶಾಸಕರ ಕಾರ್ಯವೈಖರಿಗೆ ಸಾಕ್ಷಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವಿಧಾನಪರಿಷತ್ ಮಾಜಿ ಅಧ್ಯಕ್ಷೆ ಶಾಂತೆಯAಡ ವೀಣಾ ಅಚ್ಚಯ್ಯ, ಕೆ.ಪಿ. ಚಂದ್ರಕಲಾ, ಹರಪಳ್ಳಿ ರವೀಂದ್ರ, ಹೆಚ್.ಎ. ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಡಿಸಿಸಿ ಉಪಾಧ್ಯಕ್ಷರಾದ ಕೊಕ್ಕಲೆರ ಸುಜು ತಿಮ್ಮಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಪ್ರಮುಖರಾದ ಪ್ರಕಾಶ್ ಆಚಾರ್ಯ, ಅಬ್ದುಲ್ ರಜಾಕ್, ಪುಲಿಯಂಡ ಜಗದೀಶ್, ಕಟ್ರತನ ವೆಂಕಟೇಶ್, ಮಂಡಿರ ಸದಾ ಮುದ್ದಪ್ಪ, ಅಯಿಲಪಂಡ ಪುಷ್ಪ ಪೂಣಚ್ಚ, ಉದಯ್ ಕುಮಾರ್, ಯಶ್ ದೋಲ್ಪಾಡಿ, ಕಾನೆಹಿತ್ಲು ಮೊಣ್ಣಪ್ಪ, ಮುದ್ದು ರಾಜ್, ಮಮ್ತಾಜ್ ಬೇಗಂ. ಜುಲೇಕಾಬಿ, ಮೀನಾಜ್ ಪ್ರವೀಣ್, ಪ್ರಭುರೈ, ಖಲೀಲ್ ಬಾಷ, ವಸಂತ್ ಭಟ್ ಕೆ.ಜೆ. ಪೀಟರ್, ಜಪ್ರುಲ್ಲಾ, ಫ್ಯಾನ್ಸಿ ಪಾರ್ವತಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.