ಸೋಮವಾರಪೇಟೆ, ಏ. ೨೮: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓ.ಡಿ.ಪಿ. ಮಹಿಳಾ ಸಾಂತ್ವನ ಕೌಟುಂಬಿಕ ಸಲಹಾ ಕೇಂದ್ರದಿAದ ಕಳೆದ ೫ ವರ್ಷಗಳಲ್ಲಿ ೫೪೨ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಲೆಕ್ಸಾ ಪ್ರಶಾಂತ್ ಸಿಕ್ವೇರಾ ತಿಳಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ, ಗಂಡನಿAದ ಹಿಂಸೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಹಾಗೂ ಇನ್ನಿತರ ಮಾನಸಿಕ ಹಿಂಸೆಗಳಿಗೆ ಸಂಬAಧಪಟ್ಟAತೆ ೫೫೩ ಪ್ರಕರಣಗಳು ದಾಖಲಾಗಿದ್ದು ೫೪೨ ಇತ್ಯರ್ಥವಾಗಿ ೧೧ ಪ್ರಕರಣಗಳು ಇತ್ಯರ್ಥದ ಹಂತದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.
ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವ ನೊಂದ ಮಹಿಳೆಯರಿಗೆ ಕಾನೂನು ನೆರವು ಹಾಗೂ ಆಪ್ತ ಸಮಾಲೋಚನೆಯ ಸೇವೆಯನ್ನು ಪ್ರತಿದಿನ ಒದಗಿಸಲಾಗುತ್ತಿದೆ. ಮಹಿಳಾ ದೌರ್ಜನ್ಯಕ್ಕೆ ಒಳಗಾದ ನೊಂದ ಮಹಿಳೆಯರು ಸಹಾಯವಾಣಿಯ ಸಹಕಾರ ಪಡೆದುಕೊಳ್ಳಲು ಓ.ಡಿ.ಪಿ, ಮಹಿಳಾ ಸಾಂತ್ವನ ಕೇಂದ್ರ, ಮನೆ ಸಂಖ್ಯೆ ೫೭/ಅ ಸರ್ಕಾರಿ ಆಸ್ಪತ್ರೆ ಹತ್ತಿರ, ಸೋಮವಾರಪೇಟೆ. ಕೊಡಗು, ದೂ. ಸಂಖ್ಯೆ ೦೮೨೭೬ ೨೮೨೧೯೫ ಗೆ ಕರೆ ಮಾಡಬಹುದಾಗಿದೆ.