ನಾಪೋಕ್ಲು, ಏ. ೨೮: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ. ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ೨೦೨೩ ಶುಕ್ರವಾರದ ಪಂದ್ಯಗಳಲ್ಲಿ ಮಂದನೆರವAಡ, ನಾಯಕಂಡ, ಕೈಪಟ್ಟಿರ, ಚೆಕ್ಕೇರ, ಕೈಬುಲಿರ, ಕರೋಟಿರ, ನಾಯಕಂಡ, ಮಂಡಿರ (ನೆಲಜಿ), ಚೆಕ್ಕೇರ, ಚೊಟ್ಟೆಯಂಡಮಾಡ, ಮಾಳೇಟಿರ ತಂಡಗಳು ಮುನ್ನಡೆ ಸಾಧಿಸಿದವು.

ಮುಕ್ಕಾಟಿರ ಮತ್ತು ಮಂದನೆರವAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂದನೆರವAಡ ತಂಡ ಒಂದು ವಿಕೆಟ್ ನಷ್ಟಕ್ಕೆ ೩೨ ರನ್ ಗಳಿಸಿತು. ನಂತರ ಆಟವಾಡಿದ ಮುಕ್ಕಾಟಿರ ತಂಡ ೬ ವಿಕೆಟ್ ನಷ್ಟಕ್ಕೆ ೨೬ ರನ್ ಗಳಿಸಿ ಸೋಲು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಚೆರುವಾಳಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೮ ರನ್ ಗಳಿಸಿತು. ಉತ್ತರವಾಗಿ ಆಡಿದ ನಾಯಕಂಡ ತಂಡ ಒಂದು ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ಜಯ ಸಾಧಿಸಿತು. ಕೈಪಟ್ಟಿರ ವಿರುದ್ಧ ಕೊಳುವಂಡ ತಂಡ ಮೂರು ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿತು. ಕೈಪಟ್ಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿ ಜಯ ಸಾಧಿಸಿತು. ಚೆಕ್ಕೇರ ವಿರುದ್ಧ ಬೇಪಡಿಯಂಡ ನಾಲ್ಕು ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿದರೆ, ಚೆಕ್ಕೇರ ತಂಡ ಎರಡು ವಿಕೆಟ್ ನಷ್ಟಕ್ಕೆ ೪೯ ರನ್ ಗಳಿಸಿ ಗೆಲುವು ಸಾಧಿಸಿತು. ಚೊಟ್ಟೆಯಂಡಮಾಡ ತಂಡವು ಆರು ವಿಕೆಟ್ ನಷ್ಟಕ್ಕೆ ೬೪ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಮೇಕೇರಿರ ತಂಡ ೫ ವಿಕೆಟ್ ನಷ್ಟಕ್ಕೆ ೩೯ ರನ್ ಗಳಿಸಿ ಸೋಲು ಕಂಡಿತು. ಕೈಬುಲಿರ ತಂಡದ ವಿರುದ್ಧ ಕಂಜಿತAಡ ತಂಡವು ಆರು ವಿಕೆಟ್ ನಷ್ಟಕ್ಕೆ ೪೬ ರನ್ ಗಳಿಸಿತು. ಕೈಬುಲಿರ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೦ ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ಮುಂದಿನ ಪಂದ್ಯದಲ್ಲಿ ಅಲ್ಲುಮಾಡ ತಂಡ ೫ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿತು. ಕರೋಟಿರ ತಂಡ ನಾಲ್ಕು ವಿಕೆಟ್ ನಷ್ಟದಲ್ಲಿ ೭೯ ರನ್ ಗಳಿಸಿ ಗೆಲುವು ಪಡೆಯಿತು. ನಾಯಕಂಡ ತಂಡವು ಕೈಪಟ್ಟಿರ ವಿರುದ್ಧ ಐದು ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿತು. ಕೈಪಟ್ಟಿರ ತಂಡ ೫ ವಿಕೆಟ್‌ನಲ್ಲಿ ೫೨ ರನ್ ಗಳಿಸಿ ಸೋಲನುಭವಿಸಿತು. ಅಜ್ಜಮಕ್ಕಡ ತಂಡವು ಮಂಡಿರ (ನೆಲಜಿ) ತಂಡದ ವಿರುದ್ಧ ೩ ವಿಕೆಟ್ ನಷ್ಟಕ್ಕೆ ೭೩ ರನ್ ಗಳಿಸಿದರೆ, ಉತ್ತರವಾಗಿ ಆಡಿದ ಮಂಡಿರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೭೪ ರನ್ ಗಳಿಸಿ ಜಯಸಾಧಿಸಿತು. ಚೋಡುಮಾಡ ಮತ್ತು ಚೆಕ್ಕೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಜೋಡುಮಾಡ ತಂಡ ಒಂದು ವಿಕೆಟ್ ನಷ್ಟಕ್ಕೆ ೩೩ ರನ್ ಗಳಿಸಿದರೆ, ಚಕ್ಕೇರ ತಂಡ ಮೂರು ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು.

ಮುಂದಿನ ಪಂದ್ಯದಲ್ಲಿ ತೆಕ್ಕಡ ತಂಡದ ವಿರುದ್ಧ ಚೊಟ್ಟೆಯಂಡಮಾಡ ತಂಡವು ಮೂರು ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿದರೆ, ತೆಕ್ಕಡ ೫ ವಿಕೆಟ್ ನಷ್ಟಕ್ಕೆ ೩೮ ರನ್ ಗಳಿಸಿ ಸೋಲನುಭವಿಸಿತು. ಮಾಳೇಟಿರ ತಂಡವು ಒಂದು ವಿಕೆಟ್ ನಷ್ಟಕ್ಕೆ ೮೪ ರನ್ ಗಳಿಸಿದರೆ, ಬದಲೆರ ತಂಡವು ಆರು ವಿಕೆಟ್ ನಷ್ಟಕ್ಕೆ ಕೇವಲ ೪೬ ರನ್ ಗಳಿಸಿ ಸೋಲು ಅನುಭವಿಸಿತು.