ಭಾಗಮಂಡಲ, ಏ. ೨೮: ಅಯ್ಯಂಗೇರಿ ಪಂಚಾಯಿತಿಯ ೫೦ ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಅಯ್ಯಂಗೇರಿ ಪಂಚಾಯಿತಿ ಅಧ್ಯಕ್ಷ ಕುಯ್ಯಮುಡಿ ರಂಜಿತ್ ಹಾಗೂ ಬೂತ್ ಅಧ್ಯಕ್ಷರ ಬಾರಿಕೆ ದೀಪು ಹಾಗೂ ದಿನು ಹಾಗೂ ಪಕ್ಷದ ಪ್ರಮುಖರಾದ ಹೊಸೂರು ಸತೀಶ್ ಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ರತಿ, ಉಪಾಧ್ಯಕ್ಷರಾದ ಮಿಶ್ರಿಯ ಮಾಜಿ ಸದಸ್ಯ ಮಹಮ್ಮದ್, ಮಹಾಶಕ್ತಿ ಕೇಂದ್ರದ ಮಾಚಮಂಡ ಈಶ್ವರ್ ಪ್ರಮುಖರಾದ ತೊತ್ತಿಯನ ಜೀವನ್‌ಕುಮಾರ್, ಜಮೀಲಾ, ಪ್ರಮುಖರಾದ ಕಾವೇರಿಮನೆ ಸುಗು, ಇಬ್ರಾಹಿಂ, ದಂಡಿನ ಜಯಂತ, ಚೈತ್ರ ರಘು, ಸುರೇಶ, ನಿಡ್ಯಮಲೆ ತೇಜಸ್ ಹಾಗೂ ಸೇರ್ಪಡೆಗೊಂಡ ೫೦ ಕ್ಕೂ ಹೆಚ್ಚು ಕಾರ್ಯಕರ್ತರು ಭಾಗ ವಹಿಸಿದ್ದರು.