ವೀರಾಜಪೇಟೆ, ಏ. ೨೮: ಸಮೀಪದ ಗುಂಡಿಗೆರೆ ಮಖಾಂ ಉರೂಸ್ ತಾ. ೩೦, ಮೇ ೧ ಮತ್ತು ೨ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆಯೆಂದು ಉರೂಸ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ತಾ. ೩೦ರಂದು ಸಂಜೆ ೪.೩೦ಕ್ಕೆ ದ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸಂಜೆ ೭ಗಂಟೆಗೆ ಧಾರ್ಮಿಕ ಉಪನ್ಯಾಸ, ೮ ಗಂಟೆಗೆ ಬುರ್ದಾ ಮಜ್ಲಿಸ್ ನಡೆಯಲಿದೆ. ಮೇ ೧ರಂದು ಅಪರಾಹ್ನ ೧.೩೦ ಗಂಟೆಗೆ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಅಶ್ರಫ್ ಜೌಹರಿ ಎಮ್ಮೆಮಾಡು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂದು ರಾತ್ರಿ ೭ ಗಂಟೆಗೆ ಅಬ್ದುಸ್ಸಮದ್ ಸಖಾಫಿ (ವಯನಾಡ್) ಅವರ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮೇ ೨ ರಂದು ಡಾ||. ಸಯ್ಯದ್ ಶಿಹಾಬುದ್ದೀನ್ ಅಹದ್ ಅಲ್ ಹಾಶಿಮಿ ತಂಙಳ್ ಅವರ ನೇತೃತ್ವದಲ್ಲಿ ಉಪನ್ಯಾಸ ಮತ್ತು ದಿಕ್ರ್ ದುಆ ಮಜ್ಲಿಸ್ ನಡೆಯಲಿದೆ. ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.