ಮಡಿಕೇರಿ, ಏ. ೨೯ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬAಧಿಸಿದAತೆ ಅಂಚೆ ಮತ ಪತ್ರದ ಮೂಲಕ ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರ, ಅಂಚೆ ಮತಪತ್ರದ ಮೂಲಕ ಮತದಾನ ಮಾಡುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು. ಕೊಡಗು ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟ, ಮತದಾನ ಕೇಂದ್ರಕ್ಕೆ ಆಗಮಿಸಲು ಕಷ್ಟಸಾಧ್ಯವಾಗುವ ಹಿರಿಯ ಮತದಾರರು ಹಾಗೂ ವಿಶೇಷಚೇತನರು ತಮ್ಮ ಮತವನ್ನು ಮತಪೆಟ್ಟಿಗೆಯ ಸಹಾಯದಿಂದ ಗೌಪ್ಯವಾಗಿ ಮತಪತ್ರದಲ್ಲಿ ಚಲಾಯಿಸಿದರು.

ಕೊಡಗು ಜಿಲ್ಲೆಯ ೫೪೨ ಮತಗಟ್ಟೆ ವ್ಯಾಪ್ತಿಯಲ್ಲಿ ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಅಂಚೆ ಮತದಾನ ಪ್ರಕ್ರಿಯೆಗೆ ಚಾಲನೆ ದೊರಕಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-೧೦೬ ರ ಹುದುಗೂರು ಮತಗಟ್ಟೆ ವ್ಯಾಪ್ತಿಯಲ್ಲಿ ನಾಲ್ಕು ಜನ ಹಿರಿಯ ನಾಗರಿಕರು, ಮತಗಟ್ಟೆ ಸಂಖ್ಯೆ ೧೫೧ ರ ಹುಲುಗುಂದ ಮತಗಟ್ಟೆಯಲ್ಲಿ ನಾಲ್ಕು ಮಂದಿ ಹಿರಿಯ ನಾಗರಿಕರು, ಒಬ್ಬರು ವಿಶೇಷಚೇತನರು, ಹಾಗೆಯೇ ಮತಗಟ್ಟೆ ಸಂಖ್ಯೆ ೧೫೨ ರ ಚಿಕ್ಕತ್ತೂರಿನಲ್ಲಿ ಹಿರಿಯ ನಾಗರಿಕರು, ಮತಗಟ್ಟೆ ೧೫೪ ರ ಸುಂದರ

(ಮೊದಲ ಪುಟದಿಂದ) ನಗರದಲ್ಲಿ ಒಬ್ಬ ಹಿರಿಯ ನಾಗರಿಕರು ಸೇರಿದಂತೆ ಒಟ್ಟು ಮೊದಲ ದಿನ ೧೦ ಮಂದಿ ಮತಹಕ್ಕು ಚಲಾಯಿಸಿದ್ದಾರೆ ಎಂದು ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಸೆಕ್ಟರ್ ಅಧಿಕಾರಿ ಪುಟ್ಟಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.

ವಿವಿಧ ಪೋಲಿಂಗ್ ತಂಡಗಳ ಸದಸ್ಯರು ಇಂದು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿನ ಮತದಾರರ ಮನೆ ಮನೆಗೆ ಮತಪತ್ರ, ಮತಪೆಟ್ಟಿಗೆಗಳೊಂದಿಗೆ ತೆರಳಿ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನೆರವೇರಿಸಲು ಸಹಕರಿಸಿದರು. ಪ್ರತಿ ಮಾರ್ಗದಲ್ಲಿ ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಮೈಕ್ರೋ ವೀಕ್ಷಕರು, ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ವೀಡಿಯೋಗ್ರಾಫರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ ೬ ರವರೆಗೂ ಅಂಚೆ ಮತಪತ್ರದ ಮೂಲಕ ಮತದಾನ ನಡೆಯಲಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು ೨,೪೭೪ ಮಂದಿ ಈ ಸೌಲಭ್ಯ ಬಳಸಿ ಮತ ಚಲಾಯಿಸಲು ನೋಂದಣಿ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೧೦ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೯೮೨ ಮಂದಿ ೮೦ ವರ್ಷ ಮೇಲ್ಪಟ್ಟವರು ಅಂಚೆ ಮತ ಸೌಲಭ್ಯಕ್ಕೆ ನೋಂದಣಿ ಮಾಡಿದ್ದಾರೆ. ಒಟ್ಟು ೧,೯೯೨ ಮತದಾರರು ನೋಂದಣಿಯಾಗಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ೨೬೮ ಮತ್ತು ವೀರಾಜಪೇಟೆ ಕ್ಷೇತ್ರದಲ್ಲಿ ೨೧೪ ವಿಶೇಷಚೇತನ ಮತದಾರರು ಸೇರಿ ಒಟ್ಟು ೪೮೨ ವಿಶೇಷಚೇತನರು ಅಂಚೆ ಮತ ಮಾಡಲಿದ್ದಾರೆ. ಒಟ್ಟು ೨,೪೭೪ ಮತದಾರರು ಈ ಸೌಲಭ್ಯ ಬಳಸಿ ಮತದಾನ ಮಾಡಲು ನೋಂದಾಯಿಸಿಕೊAಡಿದ್ದಾರೆ.