ಮಡಿಕೇರಿ, ಏ. ೨೭ : ಕೊಡಗು ಗೌಡ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್ ಫುಟ್ಬಾಲ್ ಪಂದ್ಯಾವಳಿ ಅಂಗವಾಗಿ ಜಿಲ್ಲೆಯ ವಿವಾಹಿತ ಮಹಿಳೆಯರಿ ಗಾಗಿ ಮುಕ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ತಾ. ೨೮ರಂದು (ಇಂದು) ನಡೆಯಲಿದೆ.
ಬೆಳಿಗ್ಗೆ ೯ ಗಂಟೆಯಿAದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಈಗಾಗಲೇ ನೋಂದಾಯಿಸಿ ಕೊಂಡಿರುವ ಜಿಲ್ಲೆಯ ವಿವಿಧ ಭಾಗಗಳ ಒಟ್ಟು ೧೬ ತಂಡಗಳು ಪ್ರತಿಷ್ಠಿತ ಪಾಣತ್ತಲೆ ಕಪ್ಗಾಗಿ ಸೆಣಸಾಡಲಿವೆ. ೧೧+೩ ಆಟಗಾರ್ತಿಯರನ್ನೊಳಗೊಂಡ ತಂಡಗಳು ಆಡಲಿದ್ದು, ವಿಜೇತರಾಗುವ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗೆ ರೂ.೧೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತಿದೆ.
ಭಾಗವಹಿಸುವ ತಂಡಗಳು
ಪ್ರಥಮ ಬಾರಿಗೆ ವಿವಾಹಿತ ಮಹಿಳೆಯರಿಗಾಗಿ ಏರ್ಪಡಿಸಿರುವ ಈ ಪಂದ್ಯಾವಳಿಯಲ್ಲಿ ನೀಲಿಯಾಟ್ ಕೋಕೇರಿ, ಫ್ರೆಂಡ್ಸ್ ವಾರಿಯರ್ ಅಮ್ಮತ್ತಿ, ಟೀಂ ಕುಕ್ಕುನೂರು, ಟೀಂ ಮರಗೋಡು, ಗೋಣಿಕೊಪ್ಪ, ಟೀಂ ಮೂರ್ನಾಡ್, ಟೀಂ ೧೧ ಮಾಲ್ದಾರೆ, ಆದರ್ಶ ಯುವತಿ ಮಂಡಳಿ, ಸಂಭ್ರಮ ಪೊಮ್ಮಕ್ಕಳ ಕೂಟ, ಭಗವತಿ ಹಾಲುಗುಂದ, ಪಾವನಿ ಗ್ರೂಪ್, ಬ್ಲಾö್ಯಕ್ ಪ್ಯಾಂರ್ಸ್, ಬೈರಂಬಾಡ ಫ್ರೆಂಡ್ಸ್, ಪೊನ್ನಂಪೇಟ್ ವುಮೆನ್ ಕ್ರಿಕೆರ್ಸ್, ಡಯಾನಾ ಫ್ರೆಂಡ್ಸ್ ಕಳತ್ಮಾಡು ಹಾಗೂ ಚೆಟ್ಟಳ್ಳಿ ಲೇಡೀಸ್ ತಂಡಗಳು ಭಾಗವಹಿಸಲಿವೆ. ಈ ಒಂದು ವಿಶೇಷ ಕ್ರಿಕೆಟ್ ಹಬ್ಬದ ಯಶಸ್ಸಿಗಾಗಿ ಪಾಣತ್ತಲೆ ಕುಟುಂಬಬಸ್ಥರು
ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
? ಸಂತೋಷ್