ಗೋಣಿಕೊಪ್ಪ ವರದಿ, ಏ. ೨೭: ಬಾಳಾಜಿ ಗ್ರಾಮದ ಚೆನ್ನಂಗೊಲ್ಲಿ ನಿವಾಸಿ ಎಸ್. ಮಂಜು ಅವರ ಪತ್ನಿ ಎಂ. ಅನು (೨೭) ಏಪ್ರಿಲ್ ೨೩ ರಿಂದ ಕಾಣೆಯಾಗಿದ್ದಾರೆ. ೪.೫ ಅಡಿ ಎತ್ತರವಿದ್ದು, ಕನ್ನಡ, ತಮಿಳು, ಮಲಯಾಳಿ ಭಾಷೆ ಮಾತನಾಡುತ್ತಾರೆ. ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲೆಂದು ಬೆಳಿಗ್ಗೆ ಹೋದವರು ಮರಳಿ ಬಂದಿಲ್ಲ ಎಂದು ಪತಿ ಮಂಜು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದಲ್ಲಿ ದೂ. ಸಂಖ್ಯೆ ೦೮೨೭೪೨೪೭೩೩೩ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.