ಕೂಡಿಗೆ, ಏ ೨೭: ಚನ್ನಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ನಿವಾಸಿ ರಾಮಣ್ಣ ರೈ ಅವರ ಪುತ್ರ ಲಾರಿ ಚಾಲಕ ಅವಿವಾಹಿತ ಹರೀಶ್ ರೈ (೩೮) ಮೃತ ವ್ಯಕ್ತಿ. ಕುಶಾಲನಗರದಿಂದ ಬೆಂಗಳೂರಿಗೆ ಮರ ಸಾಗಿಸುತ್ತಿದ್ದ ಸಂದರ್ಭ ಗುರುವಾರ ಬೆಳಗ್ಗಿನ ಜಾವ ಚೆನ್ನಪಟ್ಟಣದ ಬೈಪಾಸ್‌ನಲ್ಲಿ ಲಾರಿಯ ಹಿಂಬದಿ ಟಯರ್ ಪಂಕ್ಚರ್ ಆಗಿದೆ. ರಸ್ತೆ ಬದಿ ಟಯರ್ ಬದಲಿಸಲು ಮುಂದಾದ ಸಂದರ್ಭದಲ್ಲಿ ಹಿಂದಿನಿAದ ಬಂದ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಹರೀಶ್ ರೈ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನೋರ್ವ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಚನ್ನಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.