ಮಡಿಕೇರಿ, ಏ. ೨೭: ಕೊಡಗು ಹೆಗ್ಗಡೆ ಸಮಾಜದ ಕ್ರೀಡಾಕೂಟ ತಾ. ೨೯ ರಿಂದ ಮೇ ೨ರವರೆÀಗೆ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದÀಲ್ಲಿ ನಡೆಯಲಿದೆ ತಾ. ೨೯ ರಂದು ಪೂರ್ವಾಹ್ನ ೧೦ ಗಂಟೆಗೆ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಟ್ರೋಫಿ ದಾನಿಗಳಾದ ಮೇಜರ್ ಮಳ್ಳಡ ದೀಕ್ಷಿತ್ ದೇವಯ್ಯ . ಪೊಲೀಸ್ ಉಪ ನಿರೀಕ್ಷಕರು ಹಾಗೂ ಮುಖ್ಯಮಂತ್ರಿ ಪದಕ ವಿಜೇತರಾದ ತುದಿಮಾಡ ಸವಿ ಕ್ರೀಡಾ ಸಮಿತಿಯ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಕಾರ್ಯದರ್ಶಿ ಚಂಗಚAಡ ಕಟ್ಟಿ ಕಾವೇರಪ್ಪ, ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ. ಪ್ರಮುಖರಾದ ಪಂದಿಕAಡ ನಾಗೇಶ್, ಕೊಂಗೆಪAಡ ಕುಟ್ಟಪ್ಪ, ತೋರೆರ ಉಮೇಶ್ ಮತ್ತು ಹೆಗ್ಗಡೆ ಸಮಾಜದ ಆಡಳಿತ ಮಂಡಳಿಯರು ಹಾಜರಿರುತ್ತಾರೆ. ಕ್ರಿಕೆಟ್ ಸೀನಿಯರ್ ವಿಭಾಗದಲ್ಲಿ ೧೯ ತಂಡಗಳು, ಕ್ರಿಕೆಟ್ ಜೂನಿಯರ್ ೫ ತಂಡಗಳು. ಥ್ರೋಬಾಲ್ ೭ ತಂಡಗಳು ನೊಂದಾವಣೆ ಮಾಡಿಕೊಂಡಿವೆ. ಹೆಗ್ಗಡೆ ಜನಾಂಗದವರು ವಾಸವಿರುವ ಪ್ರದೇಶಗಳನ್ನು ೯ ವಲಯಗಳನ್ನಾಗಿ ವಿಂಗಡಿಸಿದ್ದು ಪಂದ್ಯಾಟ ವಿವಿಧ ವಲಯಗಳ ತಂಡಗಳ ಮಧ್ಯೆ ನಡೆಯಲಿವೆ. ಸಮಾರೋಪ ಸಮಾರಂಭ ಮತ್ತು ಫೈನಲ್ ಪಂದ್ಯಾಟ ಮೇ ೧ ರಂದು ಅಪರಾಹ್ನ ೧.೩೦ಕ್ಕೆ ನಡೆಯಲಿದೆ.