ನಾಪೋಕ್ಲು, ಏ. ೨೭: ಸಮೀಪದ ಹೊದವಾಡ ಗ್ರಾಮದ ಕತ್ತನೆ ಅಮ್ಮನೂರು ದೇವಸ್ಥಾನದಲ್ಲಿ ತಾ. ೨೯ ಹಾಗೂ ೩೦ರಂದು ವಾರ್ಷಿಕ ಉತ್ಸವ ನಡೆಯಲಿದೆ.
ತಾ.೨೯ರ ಶನಿವಾರ ಸಂಜೆ ೭ ಗಂಟೆಗೆ ಅಮ್ಮನೂರು ಪೂಜೆ, ೯ ಗಂಟೆಗೆ ಅನ್ನದಾನ, ರಾತ್ರಿ ೧೦.೩೦ ಗಂಟೆಗೆ ಕುಪ್ಪೆ ಪಂಜುರುಳಿ ಕೋಲ ನಡೆಯಲಿದೆ. ತಾ.೩೦ರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಆದೂರು ಪಾಷಾಣಮೂರ್ತಿ ಕೋಲ, ಮಧ್ಯಾಹ್ನ ೧ ಗಂಟೆಗೆ ಅನ್ನದಾನ, ೨.೩೦ ಗಂಟೆಗೆ ಚನ್ನಿಗುಳಿಗ ಕೋಲ ನಡೆಯಲಿದೆ ಎಂದು ದೇವಳದ ಮುಖ್ಯಸ್ಥರು ತಿಳಿಸಿದ್ದಾರೆ.