ಮಡಿಕೇರಿ. ಏ, ೨೭: ಕಾಟಕೇರಿ ಕೂರನಬಾಣೆಯ ಕೊರಗಜ್ಜ ದೈವಸ್ಥಾನದಲ್ಲಿ ಮೇ ೩ ಮತ್ತು ೪ ರಂದು ಶ್ರೀ ದೈವಗಳ ನೇಮೋತ್ಸವ ನಡೆಯಲಿದೆ.

ಮೇ ೩ ರಂದು ಸಂಜೆ ೪ ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಸಂಜೆ ೭ ಗಂಟೆಗೆ ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ ೯ ಗಂಟೆಗೆ ಪ್ರಸಾದ ವಿತರಣೆ ಹಾಗೂ ೧೦ ಗಂಟೆಗೆ ಪಾಷಾಣ ಮೂರ್ತಿ ಹಾಗೂ ಕೊರತಿ ದೈವದ ನೇಮ ನೆರವೇರಲಿದೆ.

ಮೇ ೪ ರಂದು ಮುಂಜಾನೆ ೨ ಗಂಟೆಗೆ ಕೊರಗಜ್ಜ ದೈವದ ನೇಮ, ಬೆಳಿಗ್ಗೆ ೮ ಗಂಟೆಗೆ ಧರ್ಮದೈವದ ನೇಮೋತ್ಸವ ಜರುಗಲಿದ್ದು, ಮಧ್ಯಾಹ್ನ ೧ ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ತರವಾಡು ಮನೆಯ ಪ್ರಮುಖರಾದ ಬಿ.ಸಿ. ಗಿರಿಜ ಹಾಗೂ ಕುಟುಂಬಸ್ಥರು ಮನವಿ ಮಾಡಿದ್ದಾರೆ.