ಮಡಿಕೇರಿ, ಏ. ೨೬: ಕರ್ನಾಟಕ ವಿಧಾನಸಭಾ ಚುನಾವಣೆ-೨೦೨೩ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಜಾಗೃತಿ (ಸ್ವೀಪ್) ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಸ್ತಿçÃಶಕ್ತಿ ಒಕ್ಕೂಟಗಳ ವತಿಯಿಂದ ತಾ. ೨೯ ರಂದು ಪೊನ್ನಂಪೇಟೆ ಕೆಪಿಎಸ್ ಶಾಲೆಯಲ್ಲಿ, ತಾ. ೩೦ ರಂದು ಮಡಿಕೇರಿ ಗಾಂಧಿ ಮೈದಾನದಲ್ಲಿ ಹಾಗೂ ಮೇ ೧ ರಂದು ಸೋಮವಾರಪೇಟೆಯ ಸ್ತಿçà ಶಕ್ತಿ ಭವನದಲ್ಲಿ ಆಯಾಯ ದಿನಗಳಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.
ಸ್ಪರ್ಧೆಯ ವಿವರ ಇಂತಿದೆ: ಕೊಡಗು ಮತ್ತು ಮತದಾನ ವಿಷಯ ಕುರಿತಂತೆ ರಂಗೋಲಿ ರಚಿಸಬಹುದು. ೧೮ ವರ್ಷ ಒಳಪಟ್ಟ ಹಾಗೂ ೧೮ ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಪ್ರತ್ಯೇಕವಾಗಿ ೨ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ರಂಗೋಲಿ ಸ್ಪರ್ಧೆಗೆ ಅವಶ್ಯಕವಿರುವ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಸಂಬAಧಿಸಿದ ವಿಷಯಗಳಿಗೆ ಅವಕಾಶವಿರುವುದಿಲ್ಲ. ೧ ಗಂಟೆ ಕಾಲಾವಕಾಶವಿರುತ್ತದೆ. ತಾ. ೨೮ ರೊಳಗೆ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿಗಾಗಿ ಪೊನ್ನಂಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ರಾಜೇಶ್ ಮೊ. ೯೯೦೨೩೨೩೧೭೪ ಹಾಗೂ ರಜನಿ ತಾಲೂಕು ಅಧ್ಯಕ್ಷರು, ಸ್ತಿçÃಶಕ್ತಿ ಒಕ್ಕೂಟ, ಪೊನ್ನಂಪೇಟೆ ಮೊ. ೭೭೬೦೪೪೮೩೬೩ನ್ನು ಸಂಪರ್ಕಿಸಬಹುದು.
ನೋAದಣಿಗಾಗಿ ಮಡಿಕೇರಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಟಿ.ಎಸ್. ಸೀತಾಲಕ್ಷಿö್ಮ ಮೊ. ೯೪೪೯೫೩೪೭೨೪/ ೯೧೦೮೮೧೦೭೮೨ ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತಿçà ಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ. ೮೨೧೭೫೧೧೧೯೦ ಹಾಗೂ ಪುಷ್ಪಾವತಿ, ತಾಲೂಕು ಅಧ್ಯಕ್ಷರು, ಮಡಿಕೇರಿ, ಸ್ತಿçà ಶಕ್ತಿ ಒಕ್ಕೂಟ ಮೊ. ೯೪೮೩೮೪೦೮೭೧ ಹಾಗೂ ತಾರಾಮಣಿ, ಕಾರ್ಯದರ್ಶಿ, ಸ್ತಿçà ಶಕ್ತಿ ಒಕ್ಕೂಟ ಮೊ. ೯೮೪೫೨೩೨೯೧೮ನ್ನು ಸಂಪರ್ಕಿಸ ಬಹುದು.
ನೋಂದಣಿಗಾಗಿ ಸೋಮವಾರ ಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತನುಜಾ ಮೊ. ೯೯೮೦೦೧೪೮೯೦ ಹಾಗೂ ರೆಹನಾ ಸುಲ್ತಾನ್, ಜಿಲ್ಲಾಧ್ಯಕ್ಷರು, ಸ್ತಿçÃಶಕ್ತಿ ಒಕ್ಕೂಟ, ಕೊಡಗು ಜಿಲ್ಲೆ ಮೊ. ೮೨೧೭೫೧೧೧೯೦ ಹಾಗೂ ಸುಮತಿ, ತಾಲೂಕು ಅಧ್ಯಕ್ಷರು, ಸೋಮವಾರಪೇಟೆ ಸ್ತಿçà ಶಕ್ತಿ ಒಕ್ಕೂಟ ಮೊ. ೯೪೪೯೬೯೯೬೨೭ನ್ನು ಸಂಪರ್ಕಿಸ ಬಹುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಓ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.