ಮಡಿಕೇರಿ, ಏ. ೨೬ : ಕೇವಲ ಕೊಡವ ಕುಟುಂಬಗಳಿಗೆ ಮಾತ್ರ ಸೀಮಿತವಾದ ಹಾಕಿ ಪಂದ್ಯಾವಳಿ ಯಾದರೂ ಭಾರತ ದೇಶದಲ್ಲಿ ನಡೆಯುವ ವಿವಿಧ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯ ಪಟ್ಟಿಯಲ್ಲಿ ಈ ಕೌಟುಂಬಿಕ ಹಾಕಿ ಉತ್ಸವವೂ ಒಂದಾಗಿ ಪರಿಗಣಿಸಲ್ಪಡುತ್ತಿರುವುದು ವಿಶೇಷವಾಗಿದೆ.
ರಾಷ್ಟಿçÃಯ ಕ್ರೀಡೆಯಾದ ಹಾಕಿಗೆ ಹೆಚ್ಚು ಉತ್ತೇಜನ ಸಿಗುತ್ತಿಲ್ಲ ಎಂಬ ಬೇಸರದ ನಡುವೆ ಕೊಡವ ಕೌಟುಂಬಿಕ ಹಾಕಿಹಬ್ಬ ಇದರಲ್ಲಿ ವಿಭಿನ್ನವಾಗಿ ಗುರುತಿಸಲ್ಪಡಲಿದೆ. ಕೊಡವ ಕುಟುಂಬಗಳಿಗೆ ಸೀಮಿತವಾದ... ಉತ್ಸವದ ಮಾದರಿಯ ಪಂದ್ಯಾಟ ಇದು ಎಂದು ಬಿಂಬಿತವಾಗಿದ್ದರೂ ಕೂಡ ಈ ಪಂದ್ಯಾವಳಿ ನಡೆಯುವ ರೀತಿ... ನೀಡಲ್ಪಡುತ್ತಿರುವ ಬಹುಮಾನದ ಮೊತ್ತ, ಶಿಸ್ತುಬದ್ಧ ತೀರ್ಪುಗಾರಿಕೆ, ಆಟ ಮತ್ತಿತರ ಪ್ರೋತ್ಸಾಹದಾಯಕ ಉಡುಗೊರೆಗಳು ಇದೀಗ ಮತ್ತೊಂದು ರೀತಿಯಲ್ಲಿ ಇದೂ ಕೂಡ ಕೇವಲ ಉತ್ಸವವಲ್ಲ... ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಡುವಂತಾಗಿದೆ.
ಪ್ರತಿಷ್ಠಿತ ಪಂದ್ಯಗಳ ಸಾಲಿಗೆ ಅಪ್ಪಚೆಟ್ಟೋಳಂಡ
ಇದೀಗ ತಾನೆ ಮುಕ್ತಾಯಗೊಂಡ ೨೩ನೆಯ ಕೌಟುಂಬಿಕ ಹಬ್ಬ ಅಪ್ಪಚೆಟ್ಟೋಳಂಡ ಕಪ್ ಪ್ರತಿಷ್ಠಿತ ಪಂದ್ಯಾವಳಿಗಳ ಸಾಲಿನಲ್ಲಿ ಬರುವಂತಾಗಿದೆ.
ದೇಶದಲ್ಲಿ ನಡೆಯುವ ಕೆಲವು ಪ್ರತಿಷ್ಠಿತ ಹಾಕಿ ಪಂದ್ಯಾವಳಿಗಳೆAದರೆ ನೆಹರು ಮೆಮೋರಿಯಲ್ ಕಪ್, ಸಿಂಧ್ಯ ಕಪ್, ಶಾಸ್ತಿç ಕಪ್, ಎಂ.ಸಿ.ಸಿ. ಮುರುಗಪ್ಪ ಕಪ್, ಬೈಟನ್ ಕಪ್, ಬಾಂಬೆ ಗೋಲ್ಡ್ ಕಪ್, ಒಬೈದುಲ್ಲಾ ಕಪ್, ಸುರ್ಜಿತ್ ಸಿಂಗ್ ಮೆಮೋರಿಯಲ್... ಇಂತಹ ಪಂದ್ಯಾವಳಿಗಳಾಗಿದ್ದು, ಇವುಗಳೆಲ್ಲ ಅಖಿಲ ಭಾರತ ಮಟ್ಟದ ಟೂರ್ನಮೆಂಟ್‌ಗಳಾಗಿವೆ.
ಈ ತನಕ ನೆಹರು ಕಪ್‌ನಲ್ಲಿ ರೂ. ೨ ಲಕ್ಷ, ಸಿಂಧ್ಯ ಕಪ್‌ನಲ್ಲಿ ರೂ. ೫ ಲಕ್ಷ, ಶಾಸ್ತಿç ಕಪ್‌ನಲ್ಲಿ ರೂ. ೨ ಲಕ್ಷ, ಎಂ.ಸಿ.ಸಿ. ಮುರುಗಪ್ಪ ಕಪ್ ರೂ. ೫ ಲಕ್ಷ, ಬೈಟನ್ ಕಪ್ ರೂ. ೨.೫೦ ಲಕ್ಷ, ಬಾಂಬೆ ಗೋಲ್ಡ್ ಕಪ್ ರೂ. ೨ ಲಕ್ಷ, ಒಬೈದುಲ್ಲಾ ಕಪ್ (ಭೂಪಾಲ್) ರೂ. ೧೧ ಲಕ್ಷ, ಸುರ್ಜಿತ್ ಸಿಂಗ್ ಮೆಮೋರಿಯಲ್ ರೂ. ೫ ಲಕ್ಷ... ನಗದು ಮೊತ್ತದ ಪಂದ್ಯಾವಳಿಗಳಾಗಿ ಜರುಗಿವೆ.
೨೦೧೯ರಲ್ಲಿ ಹಾಕಿ ಕರ್ನಾಟಕದಿಂದ ರೂ. ೪ ಲಕ್ಷ ನಗದು ಬಹುಮಾನದ ಬ್ಯಾಂಗಲೋರ್ ಕಪ್ ಪಂದ್ಯಾವಳಿಯೊAದು ನಡೆದಿದೆ. ಇವು ದೇಶದಲ್ಲಿ ಪರಿಗಣಿಸಲ್ಪಟ್ಟಿರುವ ಒಂದಷ್ಟು ಪ್ರಮುಖವಾದಂತಹ ದೊಡ್ಡ ಮೊತ್ತದ ಬಹುಮಾನದ ಹಾಕಿ ಪಂದ್ಯಾವಳಿಗಳಾಗಿವೆ.
ಈ ಸಾಲಿಗೆ ಅಪ್ಪಚೆಟ್ಟೋಳಂಡ
ಅಪ್ಪಚೆಟ್ಟೋಳAಡ ಕಪ್-೨೦೨೩ರಲ್ಲಿ ಆಯೋಜಕರು ವಿಜೇತ ತಂಡಕ್ಕೆ ರೂ. ೩ ಲಕ್ಷ ನಗದು, ರನ್ನರ್ಸ್ಗೆ ರೂ. ೨ ಲಕ್ಷ, ಮೂರನೇ ಸ್ಥಾನಕ್ಕೆ ರೂ. ೧ ಲಕ್ಷ ಹಾಗೂ ೪ನೇ ಸ್ಥಾನಕ್ಕೆ ರೂ. ೫೦ ಸಾವಿರದೊಂದಿಗೆ ಬೃಹತ್ ಟ್ರೋಫಿ ನೀಡಿರುವುದು ಕೊಡವ ಹಾಕಿ ಅಕಾಡೆಮಿ ಮೂಲಕ ವಿಜೇತ ತಂಡಕ್ಕೆ ರೂ. ೧.೫೦ ಲಕ್ಷ ಮೊತ್ತದ ಸಿಲ್ವರ್ ರೋಲಿಂಗ್ ಕಪ್ ನೀಡಲಾಗಿರುವುದು ಇದೀಗ ಪ್ರತಿಷ್ಠಿತವಾದ ರಾಷ್ಟಿçÃಯ ಪಂದ್ಯಾವಳಿಗಳ ಸಾಲಿನಲ್ಲಿ ಗುರುತಿಸಲ್ಪಡುವಂತಾಗಿದೆ. ಈ ತನಕ ನಡೆದಿರುವ
(ಮೊದಲ ಪುಟದಿಂದ) ಕೌಟುಂಬಿಕ ಹಾಕಿ ಉತ್ಸವದಲ್ಲಿ ಈ ಬಾರಿ ನೀಡಲಾಗಿರುವ ಬಹುಮಾನದ ಮೊತ್ತ ಹೆಚ್ಚಾಗಿರುವುದು ವಿಶೇಷ.
ಕೇವಲ ವಿಜೇತರಿಗೆ ಮಾತ್ರವಲ್ಲ ಮ್ಯಾನ್ ಆಫ್ ದಿ ಸೀರೀಸ್‌ಗೆ ರೂ. ೧ ಲಕ್ಷ ನಗದು ಹಾಗೂ ಸುಮಾರು ೫೦ ಸಾವಿರ ಮೌಲ್ಯದ ಪೀಚೆಕತ್ತಿ ಚೇಲೆ ಮತ್ತಿತರ ಬಹುಮಾನ ದೊರೆತಿದೆ.
ಫೈನಲ್ ಪಂದ್ಯ ಪುರುಷೋತ್ತಮ (ಮ್ಯಾನ್ ಆಫ್ ದ ಮ್ಯಾಚ್)ನಿಗೂ ರೂ. ೫೦ ಸಾವಿರ ಬಹುಮಾನ ಗಮನಾರ್ಹವಾದದ್ದು. ಇಬ್ಬರು ಬೆಸ್ಟ್ ವುಮನ್ ಪ್ಲೇಯರ್‌ಗಳ ಪೈಕಿ ಮೊದಲಿಗರಾಗಿ ಪರಿಗಣಿಸಲ್ಪಟ್ಟವರು ರೂ. ೧೦ ಸಾವಿರ ನಗದು ಹಾಗೂ ರೂ. ೧೪ ಸಾವಿರ ಮೊತ್ತದ ಹಾಕಿಸ್ಟಿಕ್ ಪಡೆದರೆ, ಎರಡನೇ ಸ್ಥಾನ ಪಡೆದ ಬೆಸ್ಟ್ ವುಮನ್ ಪ್ಲೇಯರ್‌ಗೆ ರೂ. ೫ ಸಾವಿರ ನಗದು ಮತ್ತು ೪ ಸಾವಿರ ಮೊತ್ತದ ಹಾಕಿ ಸ್ಟಿಕ್ ನೀಡಲಾಗಿದೆ. ಇವುಗಳಲ್ಲದೆ ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಬ್ಯಾಕ್, ಬೆಸ್ಟ್ ಹಾಫ್, ಬೆಸ್ಟ್ ಫಾರ್‌ವರ್ಡ್ನಂತಹ ಪ್ರಶಸ್ತಿ ಪಡೆದವರಿಗೆ ಆಕರ್ಷಕ ಟ್ರೋಫಿ ಜೊತೆಗೆ ಭಾರತದೊಳಗೆ ಪ್ರಯಾಣಿಸಲು ಸ್ಟಾರ್ ಏರ್‌ವೇಸ್‌ನಿಂದ ಉಚಿತ ಏರ್ ಟಿಕೆಟ್ ಡೆಕಥ್ಲಾನ್ ಕಂಪೆನಿ ಮೂಲಕ ರೂ. ೧೦ ಸಾವಿರದ ಗಿಫ್ಟ್ವೋಚರ್ ನಂತಹ ಪ್ರೋತ್ಸಾಹದಾಯಕ ಬಹುಮಾನಗಳು, ೨೫ ಪ್ರತಿಭಾನ್ವಿತ ಆಟಗಾರರಿಗೆ (ಅಪ್ ಕಮಿಂಗ್ ಪ್ಲೇರ‍್ಸ್) ದುಬಾರಿ ಬೆಲೆಯ ಹಾಕಿ ಸ್ಟಿಕ್‌ನ ಉಡುಗೊರೆಯೂ ಹಾಕಿಯ ಉತ್ತೇಜನಕ್ಕೆ ಪೂರಕವಾಗಿದೆ.
ಆಯೋಜಕರಾದ ಅಪ್ಪಚೆಟ್ಟೋಳಂಡ ಕುಟುಂಬದವರಿಗೆ ಈ ಪ್ರಯತ್ನಕ್ಕೆ ಹಲವು ದಾನಿಗಳು, ಪ್ರಾಯೋಜಕರ ಸಹಕಾರವೂ ದೊರೆತಿರುವುದನ್ನು ಉತ್ಸವ ಸಮಿತಿಯವರು ಸ್ಮರಿಸಿಕೊಳ್ಳುತ್ತಾರೆ. ರಾಷ್ಟಿçÃಯ ಕ್ರೀಡೆಯಾದರೂ ಹಾಕಿಗೆ ಹೆಚ್ಚು ಪ್ರೋತ್ಸಾಹ ಇಲ್ಲ ಎಂಬ ಕೊರಗನ್ನು ಹೋಗಲಾಡಿಸುವ