ಸೋಮವಾರಪೇಟೆ, ಏ. ೨೬: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ತಾ. ೨೭ ರಂದು (ಇಂದು) ಮತ್ತು ೨೮ ರÀಂದು ನಡೆಯಲಿದೆ.
ತಾ. ೨೭ ರಂದು ಬೆಳಿಗ್ಗೆ ೬.೩೦ ರಿಂದ ೮.೩೦ರ ವರೆಗೆ ಗಂಗಾಸ್ನಾನ ಹಾಗೂ ಮುಡಿ ಹರಕೆ ಒಪ್ಪಿಸುವುದು, ಮೆರವಣಿಗೆ ನಂತರ ಸನ್ನಿಧಿ ಪ್ರವೇಶ ಜರುಗಲಿದೆ. ತಾ. ೨೮ ರಂದು ಬೆಳಿಗ್ಗೆ ೬.೩೦ ರಿಂದ ೯.೩೦ ರವರೆಗೆ ಹಣ್ಣುಕಾಯಿ ಮತ್ತು ಮಡೆ ಉತ್ಸವ ಹಾಗೂ ಸುಗ್ಗಿ ಕುಣಿತ ಕಾರ್ಯಕ್ರಮಗಳು ನಡೆಯಲಿವೆ.