ವೀರಾಜಪೇಟೆ, ಏ. ೨೬: ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಚಿಣ್ಣರ ಬೇಸಿಗೆ ಸಂಭ್ರಮ ಶಿಬಿರವನ್ನು ತಾ. ೨೮ ರಿಂದ ೩೦ ರವರೆಗೆ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಬೆಳಿಗ್ಗೆ ೧೦ ರಿಂದ ೫ ಗಂಟೆಯವರೆಗೆ ಶಿಬಿರ ನಡೆಯಲಿದ್ದು ೧೦ ರಿಂದ ೧೬ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಆಲೋಚನೆಯ ನೆಲೆ, ಏಕಾಗ್ರತೆಯ ಕಲೆ, ಪರೀಕ್ಷಾ ಭಯದ ನಿವಾರಣೆ, ಧ್ಯಾನದ ಮಹತ್ವ ಸೇರಿದಂತೆ ಇತರ ಚಟುವಟಿಕೆಗಳು ನಡೆಯಲಿವೆ. ಈ ಶಿಬಿರವು ಉಚಿತವಾಗಿ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ೮೧೦೫೪೧೯೮೨೨ ಹಾಗೂ ೦೮೨೭೪-೨೫೬೮೩೪ ಸಂಖ್ಯೆಯನ್ನು ಸಂಪರ್ಕಿಸಬಹುದು.