ಕುಶಾಲನಗರ, ಏ.೨೫: ನಾಗರಿಕರು ಪ್ರಬುದ್ಧ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಬುದ್ಧ ಸಮಾಜ ನಿರ್ಮಾಣದ ಕನಸು ನನಸಾಗಲು ಸಾಧ್ಯ ಎಂದು ಗುಜರಾತ್ ರಾಜ್ಯದ ಶಾಸಕ ಡಾ. ಪ್ರದ್ಯಮಾನ್ ವಾಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಕಾರು ನಿಲ್ದಾಣದ ಆವರಣದಲ್ಲಿ ನಡೆದ ಬಿಜೆಪಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಡಿನ ಸಮಗ್ರ ಅಭಿವೃದ್ಧಿ ಆಗಬೇಕಾದಲ್ಲಿ ಯೋಜನೆಗಳನ್ನು ರೂಪಿಸುವ ಸರಕಾರದ ಅವಶ್ಯಕತೆ ಇದೆ ಎಂದ ಅವರು ಹೆಚ್ಚಿನ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚುರಂಜನ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂಜನ್, ತನ್ನ ಅಧಿಕಾರ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕೆಲಸಕ್ಕೆ ಸ್ಪಂದಿಸಿ ಎಲ್ಲಾ ಜನಾಂಗದ ಜನರ ಶ್ರೀ ರಕ್ಷೆಯೊಂದಿಗೆ ಈ ಬಾರಿ ಗೆಲುವು ದೊರಕಲಿದೆ ಎಂದರು. ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ವಿವಿಧ ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು. ಕುಶಾಲನಗರದ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಕೆ, ಕುಶಾಲನಗರ ತಾಲೂಕು ನಿರ್ಮಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಸರ್ಕಾರ ಮೂಲಕ ರೂಪಿಸಲಾಗಿದೆ ಎಂದರು. ಮತದಾರರು ತಮ್ಮನ್ನು ಬೆಂಬಲಿಸುವುದರೊAದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತ ತರುವಂತೆ ಮನವಿ ಮಾಡಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಬಾಹ್ಯ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ. ರಾಷ್ಟಿçÃಯವಾದಿ ಸರ್ಕಾರದ ಅಗತ್ಯವಿದ್ದು, ದೇಶದ ಅಭಿವೃದ್ಧಿ ಭದ್ರತೆ ಜನಪರ ಕಾರ್ಯಯೋಜನೆಗಳನ್ನು ರೂಪಿಸುವ ಬಿಜೆಪಿಯನ್ನು ಬೆಂಬಲಿಸುವAತೆ ಕರೆ ನೀಡಿದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಇರುವ ಶಾಸಕ ರಂಜನ್ ಅವರನ್ನು ಮತ್ತೆ ಬೆಂಬಲಿಸಿ ವಿಜೇತರನ್ನಾಗಿಸುವಂತೆ ಮನವಿ ಮಾಡಿದರು. ಬಿ ಬಿ ಭಾರತೀಶ್, ಡಾ ನವೀನ್ ಅವರು ಮಾತನಾಡಿ ರಂಜನ್ ಅವರನ್ನು ಗೆಲ್ಲಿಸುವಂತೆ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದರು. ಈ ಸಂದರ್ಭ ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಅಮೃತರಾಜ್, ಜಯವರ್ಧನ್,ಎಚ್ ಎಸ್ ಅಶೋಕ್ ಮತ್ತಿತರರು ಇದ್ದರು.