ಮಡಿಕೇರಿ, ಏ. ೨೬: ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹಟ್ಟಿಹೊಳೆ ಸಮೀಪದ ಕಾಂಡನಕೊಲ್ಲಿಯ ಶ್ರೀ ಕೃಷ್ಣ ಎಸ್ಟೇಟ್ನಲ್ಲಿ ಇಂದು ಮಧ್ಯಾಹ್ನ ಸಾವಿತ್ರಿ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಡು ಹಂದಿಯೊAದು ದಾಳಿ ಮಾಡಿದೆ. ಪರಿಣಾಮ ಸಾವಿತ್ರಿ ಅವರ ಕಾಲಿನ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.