ನಾಪೋಕ್ಲು, ಏ. ೨೫: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆÀಟ್ ನಮ್ಮೆಯ ಬಾಳೆಯಡ ಕಪ್ ಕ್ರಿಕೆಟ್‌ನ ಮೂರನೆ ದಿನದ ಪಂದ್ಯಾಟದಲ್ಲಿ ಮಡ್ಲಂಡ, ಮೂಕಳಮಾಡ, ಚೇರಂಡ, ಕುಲ್ಲೇಟಿರ, ಕುಂಞÂರ, ಹಂಚೆಟ್ಟಿರ, ಮಲ್ಲಂಡ, ಮೂಕಳಮಾಡ, ಕೊಂಗAಡ, ಕುಂಡ್ಯೋಳAಡ, ಪಟ್ರಪಂಡ ಕುಟುಂಬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ತೀತರಮಾಡ ಮತ್ತು ಮಡ್ಲಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ತೀತರಮಾಡ ತಂಡ ೩ ವಿಕೆಟ್ ನಷ್ಟಕ್ಕೆ ೫೮ ರನ್‌ಗಳ ಗುರಿ ನೀಡಿತು. ಇದನ್ನು ಬೆನ್ನೆಟ್ಟಿದ ಮಡ್ಲಂಡ ತಂಡ ೧ ವಿಕೆಟ್ ಕಳೆದುಕೊಂಡು ೮೫ ರನ್‌ಗಳಿಸಿ ಜಯ ಸಾಧಿಸಿತು. ಮೂಕಳಮಾಡ ಮತ್ತು ಅಪ್ಪಂಡೆರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಳಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೫ ರನ್‌ಗಳ ಸವಾಲೊಡ್ಡಿತು. ಇದನ್ನು ಬೆನ್ನೆಟ್ಟಿದ ಅಪ್ಪಂಡೆರAಡ ತಂಡ ೫ ವಿಕೆಟ್ ಕಳೆದುಕೊಂಡು ೪೯ ರನ್ ಗಳಿಸಿ ಸೋಲನುಭವಿಸಿತು. ಮೋಟನಾಳಿರ ಮತ್ತು ಚೇರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೋಟನಾಳಿರ ತಂಡವು ೫ ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಚೇರಂಡ ತಂಡವು ೬ ವಿಕೆಟ್ ನಷ್ಟಕ್ಕೆ ೪೫ ರನ್‌ಗಳಿಸಿ ಮುನ್ನಡೆ ಸಾಧಿಸಿತು.
ಮಂಡAಗಡ ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯಾಟದಲ್ಲಿ ಮಂಡAಗಡ ತಂಡ ೩ ವಿಕೆಟ್ ನಷ್ಟಕ್ಕೆ ೭೮ ರನ್‌ಗಳಿಸಿತು. ಅದನ್ನು ಹಿಂಬಾಲಿಸಿದ ಕುಲ್ಲೇಟಿರ ತಂಡ ೭ ವಿಕೆಟ್ ನಷ್ಟಕ್ಕೆ ೮೬ ರನ್‌ಗಳಿಸಿ ವಿಜಯಪತಾಕೆ ಹಾರಿಸಿತು. ಕಲ್ಲೇಂಗಡ ಮತ್ತು ಕುಂಞÂರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲ್ಲೇಂಗಡ ತಂಡವು ೪ ವಿಕೆಟ್ ನಷ್ಟಕ್ಕೆ ೪೯ ರನ್‌ಗಳಿಸಿದರೆ, ಕುಂಞÂರ ತಂಡವು ೩ ವಿಕೆಟ್ ನಷ್ಟಕ್ಕೆ ೫೪ ರನ್‌ಗಳಿಸಿ ಜಯ ಸಾಧಿಸಿತು. ಹಂಚೆಟ್ಟಿರ ಮತ್ತು ಬಾಚಳಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹಂಚೆಟ್ಟಿರ ತಂಡವು ೧ ವಿಕೆಟ್ ನಷ್ಟಕ್ಕೆ ೪೮ ರನ್ ದಾಖಲಿಸಿದರೆ, ಇದನ್ನು ಬೆನ್ನಟ್ಟಿದ ಬಾಚಳಿರ ತಂಡವು ೫ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮAಡೆಯAಡ ಮತ್ತು ಮಲ್ಲಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಂಡ ತಂಡ ೩ ವಿಕೆಟ್ ನಷ್ಟಕ್ಕೆ ೨೬ ರನ್‌ಗಳಿಸಿದರೆ, ಇದನ್ನು ಬೆನ್ನಟ್ಟಿದ ಮಂಡೆಯAಡ ತಂಡವು ೮ ವಿಕೆಟ್ ನಷ್ಟಕ್ಕೆ ೨೩ ರನ್‌ಗಳಿಸಿ ಸೋಲನುಭವಿಸಿತು. ಕುಲ್ಲೇಟಿರ ಮತ್ತು ಮೂಕಳಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೮೨ ರನ್ನಗಳಿಸಿದರೆ, ಮೂಕಳಮಾಡ ತಂಡ ೨ ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಲಂದಿರ ಮತ್ತು ಕೊಂಗAಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಪಾಲಂದಿರ ತಂಡವು ೫ ವಿಕೆಟ್ ನಷ್ಟಕ್ಕೆ ೫೪ ರನ್‌ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಕೊಂಗAಡ ತಂಡ ೪ ವಿಕೆಟ್ ನಷ್ಟಕ್ಕೆ ೬೦ ರನ್‌ಗಳಿಸಿ ಜಯಸಾಧಿಸಿತು. ಅಮ್ಮಣಿಚಂಡ ಮತ್ತು ಕುಂಡ್ಯೋಳAಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಮ್ಮಣಿಚಂಡ ತಂಡವು ೩ ವಿಕೆಟ್ ನಷ್ಟಕ್ಕೆ ೨೬ ರನ್‌ಗಳಿಸಿತು. ಅದನ್ನು ಬೆನ್ನಟ್ಟಿದ ಕುಂಡ್ಯೋಳAಡ ತಂಡ ೪ ವಿಕೆಟ್ ನಷ್ಟಕ್ಕೆ ೬೦ ರನ್‌ಗಳಿಸಿ ಮುನ್ನಡೆ ಸಾಧಿಸಿತು. ಪಟ್ರಪಂಡ ಮತ್ತು ಮುಂಡ್ಯೋಳAಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ರಪಂಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೫೪ ರನ್‌ಗಳ ಗುರಿ ನೀಡಿತು. ಅದನ್ನು ಬೆನ್ನಟ್ಟಿದ ಮುಂಡ್ಯೋಳAಡ ತಂಡ ೩ ವಿಕೆಟ್ ನಷ್ಟಕ್ಕೆ ೨೮ ರನ್‌ಗಳಿಸಿ ಸೋಲನುಭವಿಸಿತು. ಬಟ್ಟಿರ ಮತ್ತು ಕುಂಡ್ಯೋಳAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಟ್ಟಿರ ತಂಡವು ೨ ವಿಕೆಟ್ ನಷ್ಟಕ್ಕೆ ೩೬ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕುಂಡ್ಯೋಳAಡ ತಂಡವು ೫ ವಿಕೆಟ್ ನಷ್ಟಕ್ಕೆ ೩೯ ರನ್‌ಗಳಿಸಿ ಜಯ ಸಾಧಿಸಿತು.