ಗೋಣಿಕೊಪ್ಪ ವರದಿ, ಏ. ೨೫: ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿರುವ ಒಕ್ಕಲಿಗರ ಕ್ರೀಡಾ ಕಲರವವನ್ನು ಮಂಗಳವಾರ ದಕ್ಷಿಣ ಕೊಡಗು ಯುವ ವೇದಿಕೆ ಅಧ್ಯಕ್ಷ ವಿ. ಪಿ. ಡಾಲು ಉದ್ಘಾಟಿಸಿದರು.
ನಂತರ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಸಮಾಜಗಳು ಸಮುದಾಯದ ಒಗ್ಗಟ್ಟಿಗಾಗಿ ಕ್ರೀಡೆಯೊಂದಿಗೆ ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯವನ್ನು ಕ್ರೀಡೆಯಿಂದ ಒಂದುಗೂಡಿಸಲು ಸಹಾಯವಾಗುತ್ತಿದೆ. ಸಮುದಾಯಕ್ಕೆ ಒಗ್ಗಟ್ಟು ಮುಖ್ಯ ಎಂದರು.
ಈ ಸಂದರ್ಭ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಸಮುದಾಯದ ಪ್ರಮುಖರಾದ ವಿ.ಪಿ. ರಾಜ, ವಿ.ಪಿ. ಪ್ರಕಾಶ್, ವಿ.ಜಿ. ಗೋಪಾಲಕೃಷ್ಣ, ವಿ.ವಿ. ಸುರೇಶ್, ವಿ.ಜಿ. ರಘುನಾಥ್, ವಿ.ಎಸ್. ರಾಮಚಂದ್ರ, ಹೆಚ್.ಜಿ. ಅನಿಲ್ ಕುಮಾರ್, ಕೆ.ಆರ್. ಸುರೇಶ್, ವಿ.ಎನ್. ಮಹೇಶ್, ವಿ.ಪಿ. ಲೋಹಿತ್ಗೌಡ, ವಿ.ಕೆ. ಕಿರಣ, ವಿ.ವಿ. ಚಿಕ್ಕಣ್ಣ ಇದ್ದರು.
ಫಲಿತಾಂಶ : ಕ್ರಿಕೆಟ್ನಲ್ಲಿ ಮೊದಲ ದಿನ ೮ ತಂಡಗಳು ಗೆಲುವಿನ ನಗೆ ಬೀರಿದವು. ಮಧ್ಯಾಹ್ನ ಸುರಿದ ಮಳೆಯಿಂದ ಪಂದ್ಯಗಳು ಸ್ಥಗಿತಗೊಂಡವು. ತಿತಿಮತಿ ರಾಯಲ್ ಒಕ್ಕಲಿಗ ತಂಡವು ವಿವೈಸಿ ಕೋಟೆಕೊಪ್ಪ ವಿರುದ್ಧ ಜಯಿಸಿತು. ವಿಎನ್ಸಿಸಿ (ಎ) ತಂಡವು ಟೀ ಶ್ರೀರಾಮ್ ವಿರುದ್ಧ ಜಯ ಪಡೆದುಕೊಂಡಿತು. ವಿವೈಸಿ ಕೈಕೇರಿ ತಂಡವು ಚೆನ್ನಂಗಿ ಸ್ನೇಹ ಬಳಗ ವಿರುದ್ಧ, ಕೋಟೆಕೊಪ್ಪ ವಿವೈಸಿ (ಎ) ತಂಡವು ಮೈತಾಡಿ ಬಾಯ್ಸ್ ವಿರುದ್ಧ, ಟೀಂ ವಿರಾಟ್ ತಂಡವು ವಿಎನ್ಸಿಸಿ (ಬಿ) ವಿರುದ್ಧ, ಕೋತೂರು ಗೌಡಾಸ್ ತಂಡಕ್ಕೆ ಕಣ್ಣಂಗಾಲ ಲೆದರ್ ಬಾಯ್ಸ್ ತಂಡದ ವಿರುದ್ಧ, ಕೈಕೇರಿ ವಿವೈಸಿ ತಂಡವು ಯಂಗ್ ಫೈಟರ್ಸ್ ಇಲೆವೆನ್ ವಿರುದ್ಧ ಒಂಟಿಯAಗಡಿ ಬಾಯ್ಸ್ ತಂಡವು ಮೈತಾಡಿ ಫ್ರೆಂಡ್ಸ್ ವಿರುದ್ಧ ಜಯ ಸಾಧನೆ ಮಾಡಿದವು.