ಮಡಿಕೇರಿ, ಏ. ೨೫: ಆದಿ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾನುಭಾವರು ಎಂದು ಮಡಿಕೇರಿಯ ವೈದ್ಯರಾದ ಡಾ.ಎನ್. ಉದಯಶಂಕರ್ ವಿಶ್ಲೇಷಿಸಿದರು.

ಇಂದು ಇಲ್ಲಿನ ಬ್ರಾಹ್ಮÀಣ ಶತಮಾನೋತ್ಸವ ಭವನದಲ್ಲಿ ಶಂಕರ ಜಯಂತಿ ಆಚರಣೆೆ ಸಂದರ್ಭ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು.

ಮಾನವ ಯೋಗ ಸ್ಥಿತಿಯಲ್ಲಿಯೇ ಇರಲಿ, ಭೋಗ ಸ್ಥಿತಿಯಲ್ಲ್ಲಿಯೇ ಇರಲಿ, ವೈರಾಗ್ಯ ಮಾರ್ಗದಲ್ಲಿಯೇ ಇರಲಿ, ಸಂಘÀ ವ್ಯವಸ್ಥೆಯಲ್ಲಿರಲಿ ಅಥವಾ ಏಕಾಂಗಿಯಾಗಿರಲಿ- ಅದು ಮುಖ್ಯವಲ್ಲ ಮಾನವ ಯಾವ ಸ್ಥಿತಿಯ ಲ್ಲಿದ್ದರೂ ಮುಖ್ಯವಾಗಿ ಮನಸ್ಸಿನಲ್ಲಿ ಸದಾ ಬ್ರಹ್ಮ ಜ್ಞಾನವನ್ನು ಜಾಗೃತಿ ಗೊಳಿಸಿ ಕೊಳ್ಳಬೇಕು, ಆತ್ಮ ಜ್ಞಾನ ಹೊಂದಿರಬೇಕು. ಆಂತರಿಕವಾದ ಈ ಪ್ರಜ್ಞೆಯ ಮುಂದೆ ಬಾಹ್ಯ ಚಟುವಟಿಕೆಗಳು ಗೌಣವಾದವುಗಳು ಎನ್ನುವ ಅದ್ವೆöÊತ ತತ್ತ÷್ವವನ್ನು ಶಂಕರರು ಲೋಕಕ್ಕೆ ಸಾರಿ ದ್ದಾರೆ ಎಂದು ಅವರು ಜ್ಞಾಪಿಸಿದರು.

ಶಂಕರರ ಪೋಷಕರಾದ ಶಿವಗುರು ನಂಬೂದರಿ ಹಾಗೂ ಆರ್ಯಾಂಬ ಅವರಿಗೆ ತ್ರಿಶೂರಿನ ವಡಕ್ಕನಾಥನ ದಯೆಯಿಂದ ಮಗು ವಾಗುತ್ತದೆ. “ನಿಮಗೆ ಶತಾಯಷಿ ಯಾದ ದುಷ್ಟ ಮಗು ಬೇಕೊ ಅಲ್ಪಾಯುಷಿಯಾದ ಜ್ಞಾನವಂತ ಮಗು ಬೇಕೊ” ಎನ್ನುವ ಅಶರೀರ ವಾಣಿಗೆ “ನಮಗೆ ಜ್ಞಾನವಂತ ಅಲ್ಪಾಯು ಮಗು ಸಾಕು” ಎಂದು ಪೋಷಕರು ಕೋರಿದಾಗ ಶಂಕರರು ಜನಿಸುತ್ತಾರೆ. ಆದರೆ ಅವರಿಗೆ

(ಮೊದಲನೇ ಪುಟದಿಂದ) ಕೇವಲ ೧೬ ವರ್ಷ ಮಾತ್ರ ಆಯಸ್ಸಿರುತ್ತದೆ. ಈ ಬಾಲಕ ರಹಸ್ಯ ವೇಷಧಾರಿಯಾಗಿದ್ದ ವೇದವ್ಯಾಸರ ಮುಂದೆ ತನ್ನ ಜ್ಞಾನ ಪಾಂಡಿತ್ಯವನ್ನು ಹೊರಗೆÀಡವಿದಾಗ, ಈ ಅಸಾಮಾನ್ಯ ಬಾಲಕನಿಂದ ಧಾರ್ಮಿಕ ಕೊಡುಗೆ ಇನ್ನೂ ಅಗತ್ಯವಿದೆ ಎಂದು ಮನಗಂಡ ವೇದವ್ಯಾಸರು ಶಂಕರರ ಆಯಸ್ಸನ್ನು ೩೨ ವರ್ಷದವರೆಗೆ ಹೆಚ್ಚಿಸಿ ಹರಸುತ್ತಾರೆ ಎಂದು ಉದಯಶಂಕರ್ ವಿವರಿಸಿದರು.

ಇಂದು ಬೆಳಿಗ್ಗೆ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಆಯೋಜಿಸಲಾದ ಶಂಕರ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಎಂ.ಕೆ. ಸುಬ್ರಮಣ್ಯ ಕುಮಾರ್ ಅವರು ಶಿವ ಪೂಜೆ, ಅಭಿಷೇಕ ನಡೆಸಿದರು. ವೈಭವ ತಂಡದಿAದ ರವಿಶಂಕರ್ ಅವರ ನೇತೃತ್ವದಲ್ಲಿ ರುದ್ರ ಪಠಣ ನಡೆಯಿತು. ನಿಧಿ ಪರವಾಗಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಅರುಣ್ ಕುಮಾರ್, ಪದಾಧಿಕಾರಿಗಳಾದ ಜಯಶೀಲ ಪ್ರಕಾಶ್, ಸವಿತಾ ಉಪಸ್ಥಿತÀರಿದ್ದರು.