ಭಾಗಮಂಡಲ, ಏ. ೨೫: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆ ಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕ್ರಿಕೆಟ್ ಪರ್ಲಕೋಟಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಕುಡೆಕಲ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಅAತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ತಂಡ ೮ ಓವರ್‌ಗೆ ೭೧ ರನ್ ಕಲೆ ಹಾಕಿತು. ಕುಡೆಕಲ್ ತಂಡ ೮ ಓವರ್‌ಗೆ ೨೩ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಪರ್ಲಕೋಟಿ ತಂಡದ ಬೌಲರ್‌ಗಳಾದ ದರ್ಶನ್, ಸಜ್ಜನ್ ಹಾಗೂ ರಕ್ಷಿತ್ ಕುಡೆಕಲ್ ತಂಡವನ್ನು ಕಡಿಮೆ ರನ್‌ಗೆ ಕಟ್ಟಿ ಹಾಕಿದರು.

ಪಂದ್ಯಾಟದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ೮೫ ಗೌಡ ಕುಟುಂಬ ತಂಡಗಳು ಪಾಲ್ಗೊಂಡಿದ್ದು ಪರ್ಲಕೋಟಿ, ತಳೂರು, ಇಳಂದಿಲ ಮತ್ತು ಕುಡೆಕಲ್ಲು ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿದ್ದವು.

ತಳೂರು ಮತ್ತು ಪರ್ಲಕೋಟಿ ತಂಡಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತಳೂರು ತಂಡ ೫ ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿತು. ಪರ್ಲಕೋಟಿ ತಂಡ ಎರಡು ವಿಕೆಟ್ ನಷ್ಟಕ್ಕೆ ೬೨ ರನ್ ಗಳಿಸುವುದರ ಮೂಲಕ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯ ಕುಡೆಕಲ್ಲು ಮತ್ತು ಇಳಂದಿಲ ತಂಡಗಳ ನಡುವೆ ನಡೆಯಿತು .ಮೊದಲು ಬ್ಯಾಟ್ ಮಾಡಿದ ಕುಡೆಕಲ್ ತಂಡ ೬ ವಿಕೆಟ್ ನಷ್ಟಕ್ಕೆ ೭೨ ರನ್ ಗಳಿಸಿತು. ಇಳಂದಿಲ ತಂಡ ಐದು ವಿಕೆಟ್ ನಷ್ಟಕ್ಕೆ ೬೮ ರನ್ ಮಾಡಿ ಸೋಲನ್ನು ಅನುಭವಿಸಿತು. ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಇಳಂದಿಲ ಆರು ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿತು .ತಳೂರು ತಂಡ ಆರು ವಿಕೆಟ್ ನಷ್ಟಕ್ಕೆ ೭೮ ರನ್ ಗಳಿಸಿ ಮೂರನೇ ಸ್ಥಾನ ಪಡೆಯಿತು.

ಕೆದಂಬಾಡಿ ಕ್ರಿಕೆಟ್ ಉತ್ಸವದ ಅಂತಿಮ ಪಂದ್ಯದ ಬಳಿಕ ಚೆಟ್ಟಿಮಾನಿಯ ಕೆದಂಬಾಡಿ ಆಟದ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಮಾತನಾಡಿ ಕೆದಂಬಾಡಿ ಕುಟುಂಬಸ್ಥರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪುತ್ತಳಿ ನಿರ್ಮಾಣ ಮಾಡಲಾಗಿದೆ. ಅಚ್ಚುಕಟ್ಟಾದ ಮೈದಾನ ನಿರ್ಮಿಸಿರುವುದು ಕುಟುಂಬಸ್ಥರ ಹೆಮ್ಮೆಯಾಗಿದೆ ಎಂದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿ ಸತತ ಪರಿಶ್ರಮದಿಂದ ಕ್ರೀಡೆಗಳಲ್ಲಿ ಗೆಲುವು ಸಾಧಿಸಬಹುದು ಎಂದರು.

ಕೆದAಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ಜಯಪ್ರಕಾಶ್ ಮಾತನಾಡಿ ಸಮಾಜದ ಯುವಕ ಯುವತಿರನ್ನು ಒಗ್ಗೂಡಿಸುವ ಕೆಲಸ ಕ್ರೀಡಾಕೂಟಗಳಿಂದ ಆಗುತ್ತಿದೆ. ಹಿರಿಯರ

(ಮೊದಲನೇ ಪುಟದಿಂದ) ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ ಎಂದರು.

ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕೆದಂಬಾಡಿ ಕುಟುಂಬದ ಪಟ್ಟೆದಾರ ಕೆದಂಬಾಡಿ ಆನಂದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಂರ‍್ರಾಷ್ಟಿçÃಯ ಬಾಸ್ಕೆಟ್‌ಬಾಲ್ ಕ್ರೀಡಾಪಟು ನವನೀತ ಪಟ್ಟೆಮನೆ, ಅಂರ‍್ರಾಷ್ಟಿçÃಯ ಮೆರಥಾನ್ ಕ್ರೀಡಾಪಟು ಹೊಸೊಕ್ಲು ಚಿನ್ನಪ್ಪ, ಕೆದಂಬಾಡಿ ರಾಮಯ್ಯ ಗೌಡರ ಕುಡಿ ವೆಂಕಟರಮಣ, ಕೆದಂಬಾಡಿ ನಿತಿನ್, ಸುದನ್ ಉಪಸ್ಥಿತರಿದ್ದರು.

ವೈಯಕ್ತಿಕ ಬಹುಮಾನಗಳು

ಉತ್ತಮ ಬ್ಯಾಟ್ಸ್ಮನ್- ಗುರುಪ್ರಸಾದ್ ನೂಜಿಬೈಲು, ಉತ್ತಮ ಬೌಲರ್- ರಕ್ಷಿತ್ ಪರ್ಲಕೋಟಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ- ಕಾರ್ತಿಕ್ ಕುಡೆಕಲ್, ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ- ಇಳಂದಿಲ ಪುನೀತ್ ರಾಜ್, ಮ್ಯಾನ್ ಆಫ್ ದಿ ಮ್ಯಾಚ್ ದರ್ಶನ್ ಪರ್ಲಕೋಟಿ, ಮ್ಯಾನ್ ಆಫ್ ದಿ ಸೀರೀಸ್- ಕುಡೆಕಲ್ ಕೀರ್ತಿ, ಆಲ್‌ರೌಂಡರ್ - ತಳೂರು ವಿಕ್ಕಿ.

- ಸುನಿಲ್ ಕುಯ್ಯಮುಡಿ