ಮುಳ್ಳೂರು, ಏ. ೨೪: ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಗೋಪಾಲಪುರದಲ್ಲಿ ನಡೆದಿದೆ.
ಆಲೂರುಸಿದ್ದಾಪುರದ ಶಿವ ಎಂಬವರು ಅಪಘಾತದಲ್ಲಿ ಗಾಯ ಗೊಂಡ ಸವಾರ. ಶನಿವಾರ ಸಂತೆಯಿAದ ಸೋಮವಾರಪೇಟೆ ಮೂಲಕ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಆಲೂರುಸಿದ್ದಾಪುರದಿಂದ ಶನಿವಾರಸಂತೆಗೆ ಕಡೆಗೆ ಬರುತ್ತಿದ್ದ ಸ್ಕೂಟಿ ನಡುವೆ ಗೋಪಾಲಪುರ ಜಂಕ್ಸನ್ ಬಳಿ ಅಪಘಾತ ಸಂಭವಿಸಿದೆ.
ಈ ಸಂದರ್ಭ ಸ್ಕೂಟಿ ಸವಾರ ಶಿವ ಬಸ್ಸಿನ ಚಕ್ರಕ್ಕೆ ಸಿಲುಕಿದ್ದು, ತಲೆ, ಎದೆಭಾಗಕ್ಕೆ ತೀವ್ರ ಪೆಟ್ಟಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಶಿವ ಅವರನ್ನು ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.