*ಗೋಣಿಕೊಪ್ಪಲು, ಏ. ೨೪: ನಾಡಿನಾದ್ಯಂತ ಉತ್ತಮ ಮಳೆಯಾಗಿ ಸಮೃದ್ಧಿಗೊಳ್ಳಲು ತಿತಿಮತಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರದಂದು ಇತಿಹಾಸ ಪ್ರಸಿದ್ಧ ಮಾವುಕಲೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ ೭ ಗಂಟೆಗೆ ತಿತಿಮತಿ ಮುಖ್ಯರಸ್ತೆಯಲ್ಲಿರುವ ರಾಮ ಮಂದಿರದಿAದ ಹೊರಟ ಗ್ರಾಮಸ್ಥರ ತಂಡ ಮಾವುಕಲ್ಲು ಬೆಟ್ಟಕ್ಕೆ ತೆರಳಿ ಅಲ್ಲಿನ ಮಾವುಕಲೇಶ್ವರನ ಗುಡಿಯಲ್ಲಿ ವಾರ್ಷಿಕ ಸಂಪ್ರದಾಯದAತೆ ಮಳೆಗಾಗಿ ಪ್ರಾರ್ಥನೆ ನಡೆಸಿ ವಿಶೇಷ ಪೂಜೆ ನೆರವೇರಿಸಿದರು.
ಸೋಮವಾರ ಮಾವುಕಲ್ಲು ಬೆಟ್ಟದಲ್ಲಿ ನಡೆದ ವಿಶೇಷ ಪೂಜೆಯ ಉಸ್ತುವಾರಿಯನ್ನು ತಿತಿಮತಿಯ ಪ್ರಮುಖರಾದ ಚೆಪ್ಪುಡಿರ ಎ.ಕಾರ್ಯಪ್ಪ ವಹಿಸಿಕೊಂಡಿದ್ದರು.