ಗೋಣಿಕೊಪ್ಪ ವರದಿ, ಏ. ೨೪ : ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಕ್ಕಲಿಗರ ಕ್ರೀಡಾ ಕಲರವ ತಾ ೨೫ (ಇಂದು) ಉದ್ಘಾಟನೆಗೊಳ್ಳಲಿದ್ದು, ತಾ ೨೭ವರೆಗೆ ನಡೆಯಲಿದೆ. ೧೪ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.
ರಾಯಲ್ ಒಕ್ಕಲಿಗತಿ, ವಿವೈಸಿ ಕೋಟೆಕೊಪ್ಪ, ವಿವೈಸಿ ಕೈಕೇರಿ, ಚೆನ್ನಂಗಿ ಸ್ನೇಹ ಬಳಗ, ಟೀಮ್ ವಿರಾಟ್, ವಿಎನ್‌ಸಿಸಿ (ಬಿ), ಯಂಗ್ ಫೈಟರ್ಸ್ ಇಲೆವೆನ್, ಟೀಂ ಶ್ರೀ, ವಿಎನ್‌ಸಿಸಿ (ಎ), ವಿವೈಸಿ ಕೋಟೆಕೊಪ್ಪ (ಎ), ಮೈತಾಡಿ ಫ್ರೆಂಡ್ಸ್, ಕೋತೂರು ಗೌಡಾಸ್, ಕಣ್ಣಂಗಾಲ ಲೆದರ್ ಬಾಯ್ಸ್, ಒಂಟಿಯAಗಡಿ ಬಾಯ್ಸ್ ಸ್ಪರ್ಧೆ ನಡೆಸಲಿವೆ.
ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನೆ ನಡೆಯಲಿದ್ದು, ರಾಜ್ಯ ಒಕ್ಕಲಿಗರ ಸಂಘದ ಪ್ರಮುಖ ಹರಪಳ್ಳಿ ರವೀಂದ್ರ ಉದ್ಘಾಟಿಸಲಿದ್ದಾರೆ. ದಕ್ಷಿಣ ಕೊಡಗು ಯುವವೇದಿಕೆ ಅಧ್ಯಕ್ಷ ವಿ. ಪಿ. ಡಾಲು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್. ಎಂ. ಚಂಗಪ್ಪ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಒಕ್ಕಲಿಗ ಗೌಡ ಯುವವೇದಿಕೆ ಅಧ್ಯಕ್ಷ ಎಂ. ಡಿ. ಕೃಷ್ಣಪ್ಪ, ರಾಜ್ಯ ಘಟಕ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್. ಚೇತನ್, ಹಿರಿಯರಾದ ವಿ. ಪಿ. ರಾಜ, ವಿ. ಪಿ. ಪ್ರಕಾಶ್ ಸೇರಿದಂತೆ ಗ್ರಾಮ ಮಟ್ಟದ ಒಕ್ಕಲಿಗರ ಸಂಘದ ಅಧ್ಯಕ್ಷರುಗಳು ಪಾಲ್ಗೊಳ್ಳಲಿದ್ದಾರೆ.