ಮಡಿಕೇರಿ, ಏ. ೨೪: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರ ಬಗ್ಗೆ ವಾಟ್ಸಾö್ಯಪ್ ಗ್ರೂಪ್‌ವೊಂದರಲ್ಲಿ ಸುಳ್ಳು ಆರೋಪ ಮಾಡಿರುವ ವ್ಯಕ್ತಿಯೊಬ್ಬರ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಂಗ್ರೆಸ್ ಜಿಲ್ಲಾ ವಕ್ತಾರ ತೆನ್ನೀರಾ ಮೈನಾ ದೂರು ನೀಡಿದ್ದು, ಸಿಎನ್‌ಸಿ ಕೊಡವ ಟ್ರೆöÊಬ್ ಎಂಬ ವಾಟ್ಸಾö್ಯಪ್ ಗ್ರೂಪ್‌ವೊಂದರಲ್ಲಿ ಕಾರ್ತಿಕ್ ಚಂಗಪ್ಪ ಎಂಬವರು, ‘ಪೊನ್ನಣ್ಣ ಅವರು ಕೋಟ್ಯಂತರ ರೂ.ಗಳನ್ನು ತಮ್ಮ ವಿರುದ್ಧ ಪಕ್ಷವೊಂದು ಅಭ್ಯರ್ಥಿಯನ್ನು ಹಾಕದೆ ಇದ್ದರೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೆ, ಕೊಡಗಿನಲ್ಲಿ ಟಿಪ್ಪು ಜಯಂತಿ ಸಂದರ್ಭ ದಾಖಲಾದ ಪ್ರಕರಣಗಳನ್ನು ರದ್ದುಗೊಳಿಸಲು ಒಪ್ಪಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಮ್ಮತ್ತಿ ಕಾರ್ಮಾಡಿನ ಕಾರ್ತಿಕ್ ಚಂಗಪ್ಪನನ್ನು ವಿಚಾರಣೆಗೆ ಒಳಪಡಿಸಿ ಆತನ ಮೊಬೈಲ್ ಅನ್ನು ವಶಪಡಿಸಿಕೊಂಡು ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.