ಸೋಮವಾರಪೇಟೆ, ಏ. ೨೪: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪಿ. ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದು ಖಂಡನೀಯ. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆAದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಮನವಿಯನ್ನು ತಹಶೀಲ್ದಾರ್ ನರಗುಂದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಸಂದರ್ಭ ಜನಜಾಗೃತಿ ಸಮಿತಿಯ ಅಧ್ಯಕ್ಷ ಈರಪ್ಪ, ಜಿ.ಸಿ. ಮಂಜುನಾಥ್ ಆಚಾರ್ಯ, ಡಿ. ಪ್ರದೀಪ್, ಬಿ.ಜಿ. ರವಿ, ಕೆ.ಎನ್. ತೇಜಸ್ವಿ, ಯಡವಾರೆ ಪ್ರಕಾಶ್, ಕುಮಾರ್ ಮತ್ತಿತರರು ಇದ್ದರು.