ಕೂಡಿಗೆ, ಏ. ೨೪: ಕೂಡಿಗೆಯ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ರಾಣಿ ಚೆನ್ನಮ್ಮ ವಸತಿ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾದ ಡಾ. ಮಾಲತಿಪ್ರಿಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕೂಡಿಗೆಯ ಸೈನಿಕ ಶಾಲೆ ಅಂತರರಾಷ್ಟಿçÃಯ ಮಟ್ಟದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಪಿಡಬ್ಲೂಡಿ ಅಧೀಕ್ಷಕ ಅಭಿಯಂತರ ಬಿ. ಶ್ರೀನಿವಾಸ್ ಮಾತನಾಡಿ, ಸೈನಿಕರು ಹಾಗೂ ಕ್ರೀಡಾಕಲಿಗಳ ಜಿಲ್ಲೆ ಕೊಡಗಿನಲ್ಲಿನ ಸೈನಿಕ ಶಾಲೆ ಶಿಸ್ತು ಹಾಗೂ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾದರಿ ಎಂದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಮೂಡಿ ಬಂದ ವಿವಿಧ ಜನಪದ ನೃತ್ಯಗಳಾದ ಕೋಲಾಟ, ಕಂಸಾಳೆ ನೃತ್ಯಗಳು ಸಭಿಕರನ್ನು ಆಕರ್ಷಿಸಿತು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ. ಕಣ್ಣನ್ ಮತ್ತಿತರರು ಪಾಲ್ಗೊಂಡಿದ್ದರು.