ಮಡಿಕೇರಿ, ಏ. ೨೩: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಭಾಷಿಕ ಗೌಡ ಕುಟುಂಬಗಳ ನಡುವೆ ಮರಗೋಡಿನ ಸ.ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಾಣತ್ತಲೆ ಕಪ್‌ನಲ್ಲಿ ಪಾಣತ್ತಲೆ, ದೇವಜನ, ಬಾರಿಕೆ ಹಾಗೂ ಮಂಞAಡ್ರ ತಂಡಗಳು ಪ್ರೀ ಕ್ವಾರ್ಟರ್ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಚೆರಿಯಮನೆ ತಂಡ ಮರದಾಳು ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ಮಂಞAಡ್ರ ತಂಡ ಚೆರಿಯಮನೆ ತಂಡವನ್ನು ಟ್ರೆöÊಬ್ರೇಕರ್‌ನಲ್ಲಿ ೪-೨ ಗೋಲುಗಳಿಂದ ಮಣಿಸಿತು. ಕುಯ್ಯಮುಡಿ ತಂಡ ತೊತ್ತಿಯನ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ದೇವಜನ ತಂಡ ನಂಗಾರು ತಂಡವನ್ನು ೧-೦ ಗೋಲಿನಿಂದ ಮಣಿಸಿತು. ಪಾಣತ್ತಲೆ ಕುಕ್ಕುನೂರು ತಂಡವನ್ನು ೫-೦ ಗೋಲಿನಿಂದ ಸೋಲಿಸಿತು. ಬಾರಿಕೆ ತಂಡ ಬಿದ್ರುಪಣೆ ತಂಡವನ್ನು ೨-೦ ಗೋಲಿನಿಂದ ಮಣಿಸಿತು. ದೇವಜನ ತಂಡ ಕುಯ್ಯಮುಡಿ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು.