ಹೌದು... ವಿಶ್ವದ ರಾಷ್ಟçಗಳ ಪೈಕಿ ಜನಸಂಖ್ಯೆಯಲ್ಲಿ ಈಗ ಭಾರತದ್ದೇ ಅಗ್ರ ಸ್ಥಾನ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ಇದೀಗ ದ್ವಿತೀಯ ಸ್ಥಾನಕ್ಕೆ ಸರಿದಿದೆ.
ಈ ವರ್ಷದ ಫೆಬ್ರವರಿ ೧೩ ರಂದು ವಿಶ್ವಸಂಸ್ಥೆಯ ಮಾಹಿತಿಯಂತೆ, ಭಾರತದ ಜನಸಂಖ್ಯೆ ೧೪೧ ಕೋಟಿ ೫೪ ಲಕ್ಷ. ಚೀನಾ ತನ್ನ ದೇಶದ ಜನಸಂಖ್ಯೆ ೧೪೧ ಕೋಟಿ ೨೦ ಲಕ್ಷದಷ್ಟಿದೆ ಎಂದು ಇದೇ ವರ್ಷ ಜನವರಿ ೧೭ ರಂದು ಘೋಷಿಸಿದೆ. ಈ ವರ್ಷದ ಮಾರ್ಚ್ ೧೭ ರಂದು ವಿಶ್ವಸಂಸ್ಥೆಯ ವಲ್ಡೋðಮೀಟರ್ ಮಾಹಿತಿಯಂತೆ, ಭಾರತದ ಜನಸಂಖ್ಯೆ ೧೪೧ ಕೋಟಿ ೬೬ ಲಕ್ಷದಷ್ಟಿದೆ. ಈ ಅಂದಾಜಿನAತೆ ಭಾರತ ಪ್ರಸ್ತುತ ಚೀನಾಗಿಂತ ಸುಮಾರು ೫೦ ಲಕ್ಷದಷ್ಟು ಹೆಚ್ಚಿನ ಜನಸಂಖ್ಯೆ ಹೊಂದಿದೆ.
ಭಾರತದಲ್ಲಿ ಪ್ರತಿ ೧೦ ವರ್ಷಗಳಿಗೆ ಒಮ್ಮೆ ನಡೆಯುವ ಜನಗಣತಿ ೨೦೧೧ ರಲ್ಲಿ ನಡೆದಿತ್ತು. ಈ ೧೫ನೇ ಜನಗಣತಿಯಲ್ಲಿ ಭಾರತದ ಜನಸಂಖ್ಯೆ ೧೨೧ ಕೋಟಿ ೧ ಲಕ್ಷದಷ್ಟಿತ್ತು. ಏರುತ್ತಿರುವ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ, ೨೦೨೩ ರಲ್ಲಿ ಭಾರತ ಚೀನಾವನ್ನು ಈ ಪಟ್ಟಿಯಲ್ಲಿ ಹಿಂದೆ ಸರಿಸಬಹುದು ಎಂದು ಆಗ ಅಂದಾಜಿಸಲಾಗಿತ್ತು. ಕೋವಿಡ್-೧೯ ಮಹಾಮಾರಿಯಿಂದಾಗಿ ೨೦೨೧ ರ ಜನಗಣತಿಯನ್ನು ಮುಂದೂಡಲಾಯಿತು. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆದ ನಂತರ ಮತ್ತೊಂದು ಜನಗಣತಿ ನಡೆದ ನಂತರವೇ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದ ಕುರಿತು ಅಧಿಕೃತವಾಗಿ ಹೇಳಬಹುದು.
ವಿಶ್ವದ ರಾಷ್ಟçಗಳ ಪೈಕಿ ಭಾರತ, ಚೀನಾ ಹೊರತುಪಡಿಸಿ ಜನಸಂಖ್ಯೆಯಲ್ಲಿ ನಂತರದ ಸ್ಥಾನದಲ್ಲಿ ಐರೋಪ್ಯ ಒಕ್ಕೂಟ, ಅಮೇರಿಕಾ, ಇಂಡೋನೇಷ್ಯಾ, ಪಾಕಿಸ್ತಾನ, ನೈಜೀರಿಯಾ, ಬ್ರೆಜಿಲ್, ಬಾಂಗ್ಲಾದೇಶ, ರಷ್ಯಾ, ಮೆಕ್ಸಿಕೊ, ಜಪಾನ್, ಇಥಿಯೋಪಿಯಾ, ಫಿಲಿಫೈನ್ಸ್ ರಾಷ್ಟçಗಳಿವೆ.
ಆರಂಭದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆಯಾಗಿದ್ದು, ಬಾಲ್ಯವಿವಾಹ, ಕುಟುಂಬ ವೃದ್ಧಿಯ ಚಿಂತನೆ ದೇಶದ ಜನಸಂಖ್ಯೆ ಏರುಗತಿ ಪಡೆಯಲು ಕಾರಣವಾಯಿತು. ಈಗ ದೇಶದ ಜನಸಂಖ್ಯೆಯ ಶೇ. ೫೦ ರಷ್ಟು ೩೫ ವರ್ಷ ವಯೋಮಿತಿಗಿಂತ ಕಡಿಮೆ ಇರುವುದು. ಮಕ್ಕಳಾಗುವ ಸಾಧ್ಯತೆ ಹೆಚ್ಚಿನ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗಿದೆ. ಇದರಿಂದ ವಿಶ್ವದ ಕೇವಲ ಶೇ. ೩ ರಷ್ಟು ಭೂಪ್ರದೇಶ ಹೊಂದಿರುವ ಭಾರತ ವಿಶ್ವದ ಶೇ. ೧೭.೭ ರಷ್ಟು ಜನಸಂಖ್ಯೆ ಹೊಂದಿದೆ!
ಚೀನಾದಲ್ಲಿ ಕಳೆದ ಐದು ದಶಕಗಳಿಂದ ಜನಸಂಖ್ಯೆ ಏರಿಕೆ ಪ್ರಮಾಣ ಇಳಿಮುಖವಾಗುತ್ತಾ ಸಾಗಿದೆ. ವೃದ್ಧರ ಜನಸಂಖ್ಯೆ ಹೆಚ್ಚಿರುವುದು ಮತ್ತು ಮಕ್ಕಳ ಜನನ ಪ್ರಮಾಣ ಇಳಿಕೆ ಇದಕ್ಕೆ ಕಾರಣ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಆ ದೇಶದಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಕಳೆದ ವರ್ಷ ಎಂಟೂವರೆ ಲಕ್ಷದಷ್ಟು ತಗ್ಗಿದೆ.
ಚೀನಾಗೆ ಹೋಲಿಸಿದರೆ, ಭಾರತದಲ್ಲಿ ಜನಸಾಂದ್ರತೆಯ ಪ್ರಮಾಣ ಹೆಚ್ಚು. ಚೀನಾದಲ್ಲಿ ಪ್ರತಿ ಚದರ ಕಿಲೋಮೀಟರ್ಗೆ ೧೪೮ ಜನರಿದ್ದರೆ ಭಾರತದಲ್ಲಿ ಪ್ರತಿ ಚದರ ಕಿಲೋಮೀಟರ್ಗೆ ೪೭೬ ಜನರು ನೆಲೆ ಪಡೆದಿದ್ದಾರೆ!
೨೦೧೧ ರ ಭಾರತದ ಜನಗಣತಿಯ ಪ್ರಕಾರ ಉತ್ತರ ಪ್ರದೇಶ ೨೦ ಕೋಟಿ ಜನಸಂಖ್ಯೆಯೊAದಿಗೆ ಅಗ್ರಸ್ಥಾನ ಪಡೆದಿದೆ. ಕರ್ನಾಟಕದ ಜನಸಂಖ್ಯೆ ೬ ಕೋಟಿ ೧೧ ಲಕ್ಷದಷ್ಟಿತ್ತು. ದೇಶದ ಸಾಕ್ಷರತೆ ಪ್ರಮಾಣ ಶೇ. ೭೪ ರಷ್ಟಿದ್ದು, ಪ್ರತಿ ಸಾವಿರ ಪುರುಷರಿಗೆ ೯೪೦ ಮಹಿಳೆಯರ ಅನುಪಾತವಿತ್ತು. ಮುಂಬೈ ಮಹಾನಗರದ ಜನಸಂಖ್ಯೆ ೧ ಕೋಟಿ ೨೬ ಲಕ್ಷದಷ್ಟಿದ್ದರೆ, ಬೆಂಗಳೂರು ಮಹಾನಗರ ೫೧ ಲಕ್ಷ ಜನಸಂಖ್ಯೆ ಹೊಂದಿತ್ತು. ದೇಶದ ಒಟ್ಟು ಭೂಪ್ರದೇಶ ೨೯.೭೩ ಲಕ್ಷ ಚದರ ಕಿಲೋಮೀಟರ್ನಷ್ಟಿದ್ದು, ಶೇ. ೩೫ ರಷ್ಟು ಜನರು ನಗರ ಪ್ರದೇಶಗಳಲ್ಲಿ ನೆಲೆ ಕಂಡುಕೊAಡಿದ್ದಾರೆ.
ದೇಶದ ಜನತೆಯ ಸರಾಸರಿ ವಯಸ್ಸು ೨೮ ವರ್ಷ, ಜೀವಿತಾವಧಿಯ ಸರಾಸರಿ ವಯಸ್ಸು ೭೯ ವರ್ಷ. ಶಿಶು ಮರಣ ಪ್ರಮಾಣ ಪ್ರತಿ ಸಾವಿರಕ್ಕೆ ೨೬ ರಷ್ಟಿದೆ. ನಮ್ಮ ದೇಶದಲ್ಲಿ ೨೦೧೭ ರಲ್ಲಿ ದುಡಿಯುವ ವಯಸ್ಕರ ಸಂಖ್ಯೆ ೭೬ ಕೋಟಿ ಇದ್ದರೆ, ಚೀನಾದಲ್ಲಿ ಇದೇ ವೇಳೆಗೆ ೯೫ ಕೋಟಿಯಷ್ಟಿತ್ತು.
ವಿಶ್ವ ಜನಸಂಖ್ಯೆಯಲ್ಲಿ ನಾರ್ವೆ ‘ನಂ. ಒನ್’ ಎಂದು ಸಂಭ್ರಮಿಸುವ ಕ್ಷಣ ಇದಲ್ಲ. ಜನಸಂಖ್ಯೆಯ ಘನ ಬೆಳವಣಿಗೆ ದೇಶದ ಪ್ರಗತಿಯ ಸುಸ್ಥಿರತೆಗೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಬೇಕು. ಆಹಾರ ಸ್ವಾವಲಂಬನೆಯೊAದಿಗೆ, ಆರೋಗ್ಯ ವೃದ್ಧಿ, ಆರಾಮದಾಯಕ ಜೀವನ ಶೈಲಿ ದೇಶದ ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕು. ಆದಾಯದ ಅಸಮಾನತೆ ನೀಗಿ ದೇಶದ ಮೂರನೇ ಎರಡರಷ್ಟಿರುವ ಯುವ ಜನತೆಯ ದುಡಿಯುವ ಕೈಗಳ ಸದ್ಬಳಕೆ ಆಗಬೇಕು. ಶಿಕ್ಷಣ, ಅವಕಾಶಗಳ ಸದ್ಬಳಕೆಯೊಂದಿಗೆ ವಿಶ್ವದ ತೃತೀಯ ಆರ್ಥಿಕ ಶಕ್ತಿಯಾಗಿ ಭಾರತ ಸದೃಢವಾಗಬೇಕು.
ವಿಶ್ವ ವೇದಿಕೆಯಲ್ಲಿ ಬಲಿಷ್ಠ ಮತ್ತು ನಿರ್ಣಾಯಕ, ರಾಜಕೀಯ, ಸಾಮಾಜಿಕ, ಆರ್ಥಿಕ ಶಕ್ತಿಯಾಗಿ ಭಾರತ ರಾರಾಜಿಸಬೇಕು. ದೇಶದ ಜನಶಕ್ತಿ ಇದಕ್ಕೆ ಭದ್ರ ಬುನಾದಿಯಾಗುವಂತೆ ‘ತ್ವರಿತ ಪ್ರಗತಿ’ ಎಲ್ಲರ ಮೂಲಮಂತ್ರ ಆಗಿರಬೇಕು. ಕೂಡಿ ಬಲಗೊಳ್ಳೋಣ.
- ಕಲ್ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨