ಗೋಣಿಕೊಪ್ಪ ವರದಿ, ಏ. ೨೨: ಹುಲಿ ದಾಳಿಗೆ ಕೊಳ್ತೋಡು-ಬೈಗೋಡು ಗ್ರಾಮದ ಕೇಳಪಂಡ ಪೂವಯ್ಯ ಕುಸುಮ ಎಂಬವರಿಗೆ ಸೇರಿದ ಕರು ಬಲಿಯಾಗಿದೆ.
ಶನಿವಾರ ಬೆಳಿಗ್ಗೆ ೮ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗದ್ದೆಯ ಸಮೀಪ ಕಟ್ಟಿದ್ದ ಕರುವಿನ ಮೇಲೆ ಹುಲಿ ದಾಳಿ ಮಾಡುತ್ತಿದ್ದಾಗ ಕಾರ್ಮಿಕರು ಕಿರುಚಿಕೊಂಡಾಗ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ. ಎರಡು ಹುಲಿಗಳಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.