ಸೋಮವಾರಪೇಟೆ, ಏ. ೨೩: ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿ ಕಾಟ್ನಮನೆ ವಿಠಲ್ಗೌಡ ಅವರು ಆಯ್ಕೆಯಾಗಿದ್ದಾರೆ.
ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ವಿಠಲ್ ಗೌಡ ಅವರು ಹೆಚ್ಚು ಮತಗಳನ್ನು ಪಡೆದು ಜಯ ಸಾಧಿಸಿದರು. ಅಧ್ಯಕ್ಷ ಸ್ಥಾನ ಹೊರತುಪಡಿಸಿದಂತೆ ಉಳಿದೆಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ಪದ್ಮನಾಭ್ ಮತ್ತು ವಿಠಲ್ ಅವರು ಸ್ಪರ್ಧಿಸಿದ್ದು, ಒಟ್ಟು ೬೭ ಮಂದಿ ಮತ ಚಲಾಯಿಸಿದರು. ಉಳಿದಂತೆ ಉಪಾಧ್ಯಕ್ಷರಾಗಿ ಹೆಚ್.ಆರ್. ಪವಿತ್ರ, ಕಾರ್ಯದರ್ಶಿಯಾಗಿ ಡಿ.ಎ. ಕೃಷ್ಣಕುಮಾರ್, ಸಂಘದ ನಿರ್ದೇಶಕರುಗಳಾಗಿ ಸಿ.ಕೆ. ರಾಜೀವ್, ಸಿ.ವಿ. ತೇಜೇಶ್, ಎನ್.ಡಿ. ಅರುಣ, ಹೆಚ್.ಎಸ್. ಚಂದ್ರಶೇಖರ್, ಎಂ.ಎನ್. ಶಂಕರ್, ಬಿ.ಎಂ. ಯತೀಶ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು.
ವಕೀಲ ವೃತ್ತಿಯೊಂದಿಗೆ ರಾಜಕೀಯದಲ್ಲೂ ಸಕ್ರಿಯರಾಗಿರುವ ವಿಠಲ್ ಅವರು ಪ್ರಸ್ತುತ ಜೆಡಿಎಸ್ ಜಿಲ್ಲಾ ವಕ್ತಾರ ಹುದ್ದೆಯಲ್ಲಿದ್ದಾರೆ.