ಬೇಸಿಗೆ ಬಂತೆAದರೆ ಸಾಕು, ಎಲ್ಲೆಲ್ಲೂ ಆಕಸ್ಮಿಕ ಬೆಂಕಿ ಹರಡುವ ಪರ್ವ ಶುರುವಾಗುತ್ತದೆ. ಕಾಡು, ತೋಟಗಳಲ್ಲದೆ ನಗರ ಪ್ರದೇಶಗಳಲ್ಲೂ ಸ್ವಲ್ಪ ಪ್ರಮಾಣದ ಪೊದೆಗಳಿದ್ದರೆ, ಅವುಗಳು ಕೂಡ ಬೆಂಕಿಗಾಹುತಿಯಾಗುತ್ತವೆ. ಇದು ಕೊಡಗು ಜಿಲ್ಲೆಗೂ ಅನ್ವಯಿಸುತ್ತದೆ. ಕೆಲವೊಮ್ಮೆ ನೈಸರ್ಗಿಕವಾಗಿಯೇ ಪ್ರಾರಂಭವಾಗುವ ಕಾಡ್ಗಿಚ್ಚು ಇನ್ನು ಕೆಲವೊಮ್ಮೆ ಮಾನವ ಹಸ್ತಕ್ಷೇಪದಿಂದ ಕಾಡ್ಗಿಚ್ಚು ಹರಡುತ್ತದೆ. ಕುಚೇಷ್ಟೆಗೆ ಬೆಂಕಿ ಹತ್ತಿಸುವ ಕಿಡಿಗೇಡಿಗಳಿಂದ ಈ ಕೃತ್ಯ ನಡೆಯುತ್ತದೆ. ಇಂತಹ ಕಿಡಿಗೇಡಿಗಳು ಕೇವಲ ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಕಿಯನ್ನು ಮಾನವನ ರೀತಿಯೇ ಒಂದು ಕಡೆಯಿಂದ ಮತ್ತೊಂದೆಡೆಗೆ ಹಬ್ಬಿಸುವ ಕೃತ್ಯವನ್ನು ಪಕ್ಷಿ ಕುಲವೂ ಮಾಡುತ್ತದೆ ಎಂಬ ವಿಷಯ ಅಚ್ಚರಿ ಮೂಡಿಸುದಾದರೂ ನಿಜವೆ. ಈ ಕೃತ್ಯವನ್ನು ಯಾವುದೋ ಒಂದು ಜಾತಿಯ ಪಕ್ಷಿ ಮಾಡುವುದಿಲ್ಲ. ಬದಲಿಗೆ ೩ ಜಾತಿಯ ಗಿಡುಗ ಮಾದರಿಯ ಹಕ್ಕಿಗಳು ಮಾಡುತ್ತವೆ. ಒಟ್ಟಾಗಿ ಇವುಗಳನ್ನು ಅಗ್ನಿ ಗಿಡುಗ(ಫೈರ್‌ಹಾಕ್) ಎಂದು ಕರೆಯಲಾಗುತ್ತದೆ. ಇವುಗಳು ಏಷಿಯಾ, ಆಫ್ರಿಕಾ ಹಾಗೂ ಆಸ್ಟೆçÃಲಿಯಾದಲ್ಲಿ ನೆಲೆ ಕಂಡಿವೆಯಾದರೂ ಅಗ್ನಿ ಗಿಡುಗವು ಕೇವಲ ಆಸ್ಟೆçÃಲಿಯಾದಲ್ಲಿ ಮಾತ್ರ ಇದೆ.

ಆಸ್ಟೆçÃಲಿಯಾ ಖಂಡವು ಸಹಸ್ರ ತಳಿಗಳ ಜೀವರಾಶಿಗಳ ಹಾಗೂ ಗಿಡಮೂಲಿಕೆಗಳ ತಾಣವಾಗಿ ಹೆಸರುವಾಸಿಯಾಗಿದೆ. ಉತ್ತರ ಆಸ್ಟೆçÃಲಿಯಾ ಭಾಗದ ಒಣ ಪ್ರದೇಶವು ಬೇಸಿಗೆಯಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸುವ ಪ್ರದೇಶವೆಂದೂ ಕುಖ್ಯಾತಿ ಪಡೆದಿದೆ. ಪ್ರತಿ ವರ್ಷ ೩೦ ರಿಂದ ೪೦ ಶೇಕಡ ಕಾಡು ಬೇಸಿಗೆಯ ಬೆಂಕಿಗಾಹುತಿಯಾಗಿ ಸಹಸ್ರಾರು ಪ್ರಾಣಿ - ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತವೆ. ಇಷ್ಟು ಪ್ರಮಾಣವು ನೈಸರ್ಗಿಕವಾಗಿ ಸಂಭವಿಸುವ ಕಾಡ್ಗಿಚ್ಚಿನಿಂದ ಹಾನಿಯಾಗುತ್ತದೆ. ಉಳಿದಂತೆ ಅಲ್ಲಿನ ಮೂಲ ನಿವಾಸಿಗಳು ಪ್ರತಿ ವರ್ಷ ಬೇಸಿಗೆ ಅಂತ್ಯದಲ್ಲಿ ನಿಷ್ಪçಯೋಜಕ ಕುರುಚಲು ಪ್ರದೇಶವನ್ನು ಬೆಂಕಿ ಹಾಕಿ ನಾಶಪಡಿಸುತ್ತಾರೆ. ನಂತರ ಆ ಪ್ರದೇಶದ ಫಲವತ್ತತೆ ಹೆಚ್ಚಾಗಿ ಅಲ್ಲಿ ಉತ್ತಮ ಬೆಳೆ, ಹಣ್ಣುಗಳು ಬೆಳೆಯಲಾರಂಭಿಸುತ್ತವೆ. ಇದನ್ನು ಸೇವಿಸಲು ನೂರಾರು ಸಂಖ್ಯೆಯಲ್ಲಿ ಆ ಸ್ಥಳಕ್ಕೆ ವಿವಿಧ ತಳಿಯ ಪ್ರಾಣಿಗಳು ಬಂದು ಸೇರುವಾಗಿ ಅಲ್ಲಿನ ಮೂಲ ನಿವಾಸಿಗಳು ಇಂತಹ ಪ್ರಾಣಿಗಳನ್ನು ಬೇಟೆ ಮಾಡಿ ಆಹಾರ ಸೇವಿಸುತ್ತಾರೆ. ತಾನು ಸೃಷ್ಟಿಸಿದ ಬೆಂಕಿಯಿAದ ಪರೋಕ್ಷವಾಗಿ ತನ್ನ ಹಸಿವನ್ನು ಮನುಷ್ಯ ನೀಗಿಸಿಕೊಳ್ಳುತ್ತಾನೆ. ಆದರೆ ಇದೇ ರೀತಿ ಹಕ್ಕಿಯೊಂದು ಮಾಡುವುದು ಅಚ್ಚರಿಯ ವಿಷಯ.

ಬ್ಲಾಕ್ ಕೈಟ್, ವಿಸ್ಲಿಂಗ್ ಕೈಟ್ ಹಾಗೂ ಬ್ರೌನ್ ಫಾಲ್ಕನ್ ಎಂಬ ೩ ಜಾತಿಗಳ ಗಿಡುಗ ಹಕ್ಕಿಗಳು ಬೆಂಕಿಯೊAದಿಗೆ ಆಟವಾಡುವಷ್ಟು ಪರಿಣಿತಿ ಹೊಂದಿವೆ. ಈ ೩ ಜಾತಿಗಳನ್ನು ಫೈರ್‌ಹಾಕ್ (ಅಗ್ನಿ ಗಿಡುಗ) ಎಂದು ಕರೆಯಲಾಗುತ್ತದೆ. ಕಾಡ್ಗಿಚ್ಚು ಸಂಭವಿಸುವಾಗ ಬೆಂಕಿ ಹಬ್ಬುವ ವ್ಯಾಪ್ತಿಯ ಅನೇಕ ಪ್ರಾಣಿ-ಪಕ್ಷಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತವೆ. ಭುವಿಯಲ್ಲಿ ಸಣ್ಣ-ಪುಟ್ಟ ಗೂಡುಗಳನ್ನು ಅಗೆದು ವಾಸಿಸಿರುವ ಮೊಲ ಸೇರಿದಂತೆ ಇತರ ಸಣ್ಣ ತಳಿಯ ಪ್ರಾಣಿಗಳು ಕಾಡ್ಗಿಚ್ಚು ಸಂಭವಿಸಿದೊಡನೆ ತಮ್ಮ ಗೂಡುಗಳಿಂದ ಹೊರ ಬಂದಾಗ ಗಿಡುಗಗಳು ಅವುಗಳ ಮೇಲೆ ಪ್ರಹಾರ ಮಾಡಿ ತಮ್ಮ ಹೊಟ್ಟೆಯನ್ನು ನೀಗಿಸಿಕೊಳ್ಳುತ್ತವೆ. ಇಲ್ಲಿಗೇ ನಿಲ್ಲದ ಗಿಡುಗಗಳ ಚಾಣಾಕ್ಷತನ ಕಾಡ್ಗಿಚ್ಚು ಸಂಭವಿಸದ ಪ್ರದೇಶದಲ್ಲಿಯೂ ಬೆಂಕಿ ಹಬ್ಬಿಸುವ ಕಾರ್ಯವನ್ನು ಮಾಡುತ್ತವೆ. ಬೆಂಕಿ ಹತ್ತಿಕೊಂಡ ಕಡ್ಡಿ, ಮರದ ಸಣ್ಣ ಕೊಂಬೆಗಳನ್ನು ಕೈ ಅಥವಾ ಕೊಕ್ಕೆಯಲ್ಲಿ ಹೊತ್ತಿ ಇತರ ಒಣ ಪ್ರದೇಶಕ್ಕೆ ಹಾರಿ ಅಲ್ಲಿನ ಒಣ ಹುಲ್ಲುಗಳ ಮೇಲೆ ಈ ಕಡ್ಡಿಯನ್ನು ಎಸೆದು ಕಾಡ್ಗಿಚ್ಚು ಸೃಷ್ಟಿಸುತ್ತವೆ. ನಂತರ ಆ ಪ್ರದೇಶದಲ್ಲಿನ ಸಣ್ಣ-ಪುಟ್ಟ ಪ್ರಾಣಿಗಳು ಗೂಡಿನಿಂದ ಹೊರಬರುವಾಗ ಅವುಗಳನ್ನು ಬೇಟೆಯಾಡುತ್ತವೆ ಈ ಹಕ್ಕಿಗಳು. ಈ ಮೂಲಕ ಕಾಡ್ಗಿಚ್ಚಿಗೆ ಕಾರಣವಾಗುವ ಜೀವರಾಶಿಗಳಲ್ಲಿ ಮಾನವನಲ್ಲದೆ ಈ ಹಕ್ಕಿಯೂ ಸ್ಥಾನ ಪಡೆದಿದೆ.

(ಪಿ.ಜಿ.ಆರ್.)