ನಾಪೋಕ್ಲು, ಏ. ೨೨: ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡಿತು.
ತಾ. ೧೩ ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಮಧ್ಯಾಹ್ನ ಮತ್ತು ರಾತ್ರಿ ಉತ್ಸವಬಲಿ ನಡೆಯಿತು. ಭಾನುವಾರ ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ಜರುಗಿತು. ಸೋಮವಾರ ನೃತ್ಯಬಲಿ ನಡೆದು ಸಂಜೆ ದೀಪಾರಾಧನೆ, ಮಂಗಳವಾರ ಪಟ್ಟಣಿಹಬ್ಬ ಭಕ್ತ ಜನರ ಸಮ್ಮುಖದಲ್ಲಿ ನೆರವೇರಿತು. ತುಲಾಭಾರ, ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಜರುಗಿದವು.
ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. ಜೋಡಿ ದೇವರ ನೃತ್ಯೋತ್ಸವವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಕಣ್ತುಂಬಿಕೊAಡರು.
ಜಾತ್ರಾ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್, ತಂತ್ರಿಗಳಾದ ಕೃಷ್ಣ ನೂರಿತಾಯ, ದಿವಾಕರ, ಕೃಷ್ಣಪ್ರಸಾದ್, ಸತ್ಯಮೂರ್ತಿ ಇತರರು ನೆರವೇರಿಸಿಕೊಟ್ಟರು.
ಈ ಸಂದರ್ಭ ಭಂಡಾರ ತಕ್ಕರಾದ ಎಡಿಕೇರಿ ಪ್ರವೀಣ್, ನಾಡುತಕ್ಕರಾದ ಚೌರೀರ ಚೋಮಣಿ ಬೋಪಯ್ಯ, ಅಧ್ಯಕ್ಷ ಪೊದುವಾಡ ಸುಜಯ್, ಬೊಳ್ಳಿಯಂಡ ಹರೀಶ್ ಸೇರಿದಂತೆ ಇತರ ತಕ್ಕ ಮುಖ್ಯಸ್ಥರು ಹಾಗೂ ನಿರ್ವಹಣಾ ಮತ್ತು ವಾರ್ಷಿಕೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.