ಪೆರಾಜೆ, ಏ. ೨೨: ಅಯ್ಯಪ್ಪ ದೀಪೋತ್ಸವ ಸಮಿತಿ ಹಾಗೂ ಚಿಗುರು ಯುವಕ ಮಂಡಲ ಪೆರಾಜೆ ವತಿಯಿಂದ ಪೆರಾಜೆ ಪಯಸ್ವಿನಿ ನದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೆರುಮುಂಡ ಅವರ ಅಧ್ಯಕ್ಷತೆಯಲ್ಲಿ ಶ್ರೀ ಶಾಸ್ತಾವು ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಷ್ಟçಮಟ್ಟದ ಈಜು ತರಬೇತುದಾರದ ಯಶವಂತ ಪುತ್ತೂರು ಮಾತನಾಡಿ, ಎಷ್ಟೇ ಬಾರಿ ಈಜು ಮಾಡಿದರೂ ಆಯಾಸ ಆಗುವುದಿಲ್ಲ, ಮನುಷ್ಯನಿಗೆ ಯಾವ ಕ್ರೀಡೆಯಿಂದಲೂ ಸಿಗದಷ್ಟು ಮಾನಸಿಕ ನೆಮ್ಮದಿ, ನಿರಾಳತೆ ಈಜಿನಿಂದ ಮಾತ್ರ ಸಿಗುತ್ತದೆ. ಮಕ್ಕಳೆಲ್ಲರು ಉತ್ಸಾಹದಿಂದ ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಕಲಿಕೆ ಅನ್ನುವುದು ನಿರಂತರ ಪ್ರಕ್ರಿಯೆಯಾಗಿರುತ್ತದೆ ಇದಕ್ಕೆ ಕೊನೆ ಎಂಬುವುದಿಲ್ಲ. ಈಜಲು ತೆರಳುವಾಗ ಅನುಸರಿಸಬೇಕಾದ ಜಾಗೃತಿಗಳನ್ನು ವಿವರಿಸುತ್ತ, ಈ ಸ್ವಿಮ್ಮಿಂಗ್ ಕ್ಯಾಂಪ್‌ನಿAದ ಸಾಕಷ್ಟು ಅನುಭವಗಳನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಈ ಮೂಲಕ ಮುಂಬರುವ ಅವಕಾಶಗಳನ್ನು ಬಳಸಿಕೊಂಡು ಮತ್ತಷ್ಟು ಹೆಸರುವಾಸಿಯಾಗಲಿ ಎಂದು ಆಶಿಸಿದರು.

ಶ್ರೀ ಶಾಸ್ತಾವು ದೇವಸ್ಥಾನ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಮಾತನಾಡಿ, ಗ್ರಾಮದಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದ ಮಕ್ಕಳು ಪರಿಸರದೊಂದಿಗೆ ಬೆಳೆದು ಬಂದ ಕಾರಣ ಬೇಗನೆ ಈಜನ್ನು ಕಲಿಯುತ್ತಾರೆ. ಈಜು ಮಾನಸಿಕ ಹಾಗೂ ದೈಹಿಕವಾಗಿ ಮನುಷ್ಯನನ್ನು ಸದೃಢಗೊಳಿಸುತ್ತದೆ ಎಂದರು.

ಸಭೆಯಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ೬೪ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ಅಯ್ಯಪ್ಪ ದೀಪೋತ್ಸವದ ಕಾರ್ಯದರ್ಶಿ ಯುವನಂದ ಪೆರಂಗಜೆ, ಚಿಗುರು ಯುವಕ ಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು, ತರಬೇತುದಾರರು, ಸೇರಿದಂತೆ ದೀಪೋತ್ಸವ ಸಮಿತಿ ಹಾಗೂ ಯುವಕ ಮಂಡಲದ ಸದಸ್ಯರು ಇದ್ದರು. ಕಾರ್ಯಕ್ರಮವನ್ನು ಜೀವನ್ ಮಜಿಕೋಡಿ ಸ್ವಾಗತಿಸಿ, ಯುವನಂದ ಪೆರಂಗಜೆ ವಂದಿಸಿದರು.