ಸುಂಟಿಕೊಪ್ಪ, ಏ. ೨೨: ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆಯ ವಾಸದ ಮನೆಯ ಸಮೀಪದಲ್ಲಿದ್ದ ಉರಗವೊಂದನ್ನು ಪಂಚಾಯಿತಿ ಸಿಬ್ಬಂದಿ ಹಾಗೂ ಉರಗ ಪ್ರೇಮಿ ಬಾಲು ಅವರು ಸೆರೆ ಹಿಡಿದು ಕಾಡಿಗೆ ಬಿಟ್ಟರು.

ಪಂಪ್‌ಹೌಸ್ ಬಡಾವಣೆಯ ನಿವಾಸಿ ಗಳಾದ ರವಿ ಮತ್ತು ಮುರುಗೇಶ್ ಎಂಬವರ ವಾಸದ ಮನೆಯ ಸಮೀಪ ಕಳೆದ ೧ ವಾರದಿಂದ ಉರಗವೊಂದು ಕಂಡು ಬಂದಿತ್ತು. ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಮನೆಯ ಮಂದಿ ಕೂಡಲೇ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸ್ನೇಕ್ ಬಾಲು ಅವರಿಗೆ ಮಾಹಿತಿ ನೀಡಿದರು. ಬಾಲು ಕೂಡಲೇ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಬಿಸಿಲ ಬೇಗೆಗೆ ಹಾವುಗಳು ಮನೆಯ ಸಮೀಪ ಬರುತ್ತಿದ್ದು, ಅವುಗಳಿಗೆ ಯಾವುದೇ ರೀತಿಯ ಹಿಂಸೆ ನೀಡದೆ ಅವುಗಳನ್ನು ಕಂಡ ತಕ್ಷಣ ಈ ದೂರವಾಣಿ ಸಂಖ್ಯೆಗೆ ೯೩೮೦೦೯೮೫೦೦ ಕರೆ ಮಾಡುವಂತೆ ತಿಳಿಸಿದ್ದಾರೆ.