ಸಿದ್ದಾಪುರ, ಏ. ೨೨: ಸಿದ್ದಾಪುರದಲ್ಲಿ ಶನಿವಾರದಂದು ಸುರಿದ ಮಳೆ ಜನರಿಗೆ ಹರ್ಷ ತರಿಸಿದೆ. ಸಿದ್ದಾಪುರದಲ್ಲಿ ಶನಿವಾರದಂದು ಮಧ್ಯಾಹ್ನದ ನಂತರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಬಿಸಿಲಿನ ತಾಪದಿಂದಾಗಿ ಕಾಫಿ ಗಿಡಗಳು ಸೊರಗಿದ್ದವು. ಅಲ್ಲದೇ ರೈತರು ಕೂಡ ಮಳೆಯ ನಿರೀಕ್ಷೆಯಲ್ಲಿದ್ದರು. ಶನಿವಾರದಂದು ಸುರಿದ ಮಳೆಯಿಂದಾಗಿ ರೈತರು ಕೊಂಚ ನಿಟ್ಟುಸಿರುಬಿಡುವಂತಾಗಿದೆ.