ವೀರಾಜಪೇಟೆ, ಏ. ೨೨: ವೀರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಭಗವತಿ ದೇವರ ಬೇಡುಹಬ್ಬ ಸಂಭ್ರಮದಿAದ ನಡೆಯಿತು.

ಬೇಡು ಹಬ್ಬದ ಸಂದರ್ಭ ಭಗವತಿ ದೇಗುಲದಲ್ಲಿ ಪಟ್ಟಣಿ, ಕಳಿಕಟ್ಟು ಸೇರಿದಂತೆ ಭಂಡಾರ ಹಾಕುವುದು, ವಿವಿಧ ಕಾರ್ಯಕ್ರಮಗಳು ನಡೆದವು. ಬೇಡು ಹಬ್ಬದ ಸಂದರ್ಭ ನಡೆಯುವ ಪೂಜಾ ಕಾರ್ಯಗಳಲ್ಲಿ ಇತರರು ಭಾಗವಹಿಸುತ್ತಾರಾದರೂ ಬೇಡು ಹಬ್ಬದ ಆಚರಣೆಯ ಬಹುಪಾಲು ಗ್ರಾಮದವರಿಗೆ ಮೀಸಲಾಗಿರುತ್ತದೆ.

ಈ ಗ್ರಾಮದ ಸುಮಾರು ೧೫ಕ್ಕೂ ಹೆಚ್ಚು ಕುಟುಂಬಗಳು ಆಚರಿಸುವ ಈ ವಿಶಿಷ್ಟ ಹಬ್ಬ ಪಟ್ಟಣಿ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿ ವಿವಿಧ ವೇಷ ಧರಿಸುವುದರೊಂದಿಗೆ ಕಳಿಕಟ್ಟು ನಡೆಯಿತು. ಈ ಸಂದರ್ಭ ಹತ್ತು ಹಲವು ವಿಚಿತ್ರ ವೇಷಗಳನ್ನು ಧರಿಸಿ ಮನೆ ಮನೆಗೆ ತೆರಳಿ ಕುಣಿದು, ನಂತರ ದೇವರ ಸನ್ನಿಧಿಗೆ ಮರಳಿ ವೇಷ ಕಳಚುವ ಮೂಲಕ ಹರಕೆಯನ್ನು ನಡೆಸಿದರು. ಪ್ರತಿ ಮನೆಯ ತಲಾ ಒಬ್ಬರು ವೇಷ ಧರಿಸುವುದು ವಾಡಿಕೆಯಾಗಿದೆ. ಈ ಹಬ್ಬದಲ್ಲಿ ಗ್ರಾಮಸ್ಥರು ಅತ್ಯಂತ ಸಂಭ್ರಮದಿAದ ಪಾಲ್ಗೊಂಡಿದ್ದರು.