ಮಡಿಕೇರಿ, ಏ. ೨೧: ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ೨೦೨೨ನೇ ಸಾಲಿನಲ್ಲಿ ರಾಜ್ಯದಲ್ಲಿ ೬ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿಯ ಫಲಿತಾಂಶದಲ್ಲಿ ಮೂರನೇ ಸ್ಥಾನಕ್ಕೆ ಏರಿರುವುದು ವಿಶೇಷವಾಗಿದೆ. ಕಳೆದ ವರ್ಷ ಶೇ.೭೩.೨೨ ಫಲಿತಾಂಶ ಜಿಲ್ಲೆಗೆ ಬಂದಿದ್ದು, ಕೊಡಗು ೬ನೇ ಸ್ಥಾನದಲ್ಲಿತ್ತು. ಆದರೆ ೨೦೨೩ನೇ ಸಾಲಿನ ಪರೀಕ್ಷೆಯಲ್ಲಿ ಶೇ.೯೦.೫೫ರಷ್ಟು ಫಲಿತಾಂಶದೊAದಿಗೆ ಜಿಲ್ಲೆಯ ಸಾಧನೆ ಸುಧಾರಿಸಿದಂತಾಗಿದೆ. ಶೇ.೯೫.೩೩ ಫಲಿತಾಂಶದೊAದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಹಾಗೂ ಶೇ.೯೫.೨೪ ಫಲಿತಾಂಶದೊAದಿಗೆ ಉಡುಪಿ ಜಿಲ್ಲೆ ಎರಡನೆಯ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಶೇ. ೬೨.೯೮ ಫಲಿತಾಂಶದೊAದಿಗೆ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಳೆದ ವರ್ಷಕ್ಕಿಂತ ಶೇಕಡವಾರು ಫಲಿತಾಂಶ ಹೆಚ್ಚಳವಾಗಿರುವುದು ಮತ್ತೊಂದು ವಿಶೇಷವಾಗಿದೆ.
ರಾಜ್ಯದಲ್ಲಿ ಶೇ.೭೪.೬೭ ಫಲಿತಾಂಶ
ರಾಜ್ಯದಲ್ಲಿ ಈ ಬಾರಿ ಒಟ್ಟಾರೆಯಾಗಿ ಶೇ. ೭೪.೬೭ ಫಲಿತಾಂಶ ಬಂದಿದೆ. ಪರೀಕ್ಷೆಗೆ ಒಟ್ಟು ೭,೦೨,೦೬೭ ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ೫,೨೪,೨೦೯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
೨೦೨೩ನೇ ಸಾಲಿನ ಪರೀಕ್ಷೆಗೆ ರಾಜ್ಯದಲ್ಲಿ ೭.೨೭,೯೨೩ ಮಂದಿ ನೋಂದಾಯಿಸಿಕೊAಡಿದ್ದು, ಇವರಲ್ಲಿ ೭,೨೫,೮೨೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು. ಆದರೆ, ಎಲ್ಲಾ ವಿಷಯಗಳಿಗೆ ಸಂಬAಧಿಸಿದAತೆ ಒಟ್ಟು ೨೩,೭೫೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ವಿಜ್ಞಾನ ಫಲಿತಾಂಶ ಹೆಚ್ಚು
ರಾಜ್ಯದಲ್ಲಿ ಈ ಬಾರಿ ವಿಜ್ಞಾನ ವಿಭಾಗದಲ್ಲಿ ಶೇ.೮೫.೭೧ರಷ್ಟು ಫಲಿತಾಂಶ ಬಂದಿದ್ದು, ಇದು ವಾಣಿಜ್ಯ ಹಾಗೂ ಕಲಾ ವಿಭಾಗಕ್ಕಿಂತ ಹೆಚ್ಚಿರುವುದು ಗಮನಾರ್ಹವಾಗಿದೆ. ವಾಣಿಜ್ಯ ವಿಭಾಗದಲ್ಲಿ ಶೇ.೭೫.೮೯ ಹಾಗೂ ಕಲಾ ವಿಭಾಗದಲ್ಲಿ ಶೇ.೬೧.೨೨ರಷ್ಟು ಫಲಿತಾಂಶ ಬಂದಿದೆ. ಮಾರ್ಚ್ ೯ರಿಂದ ೨೯ರ ತನಕ ರಾಜ್ಯದ ಒಟ್ಟು ೧೧೦೯ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಒಟ್ಟು ೬೫ ಕೇಂದ್ರಗಳಲ್ಲಿ ೨೩,೬೦೬ ಮೌಲ್ಯಮಾಪಕರಿಂದ ನಡೆಸಲಾಗಿತ್ತು.
ಕೊಡಗು ಜಿಲ್ಲೆಯ ಕಾಲೇಜುಗಳÀಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಸಾಧನೆ ಮಾಡಿದ್ದಾರೆ. ಮಡಿಕೇರಿ ಸಂತ ಮೈಕಲರ ಕಾಲೇಜಿನ ವಾಣಿಜ್ಯ ವಿಭಾಗದ ರೊಲೆನ್ಸಿಯ ಬಿಯಾನ್ ರಾಯ್ ಅವರು ೬೦೦ ಕ್ಕೆ ೫೯೩ ಅಂಕ ಗಳಿಸಿ ಜಿಲ್ಲೆಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕುಶಾಲನಗರ ವಿವೇಕಾನಂದ ಪಿ.ಯು ಕಾಲೇಜಿನ ಬ್ರಿಜೇಶ್ ನಿರಂಜನ್ ಕೆ. ವಿಜ್ಞಾನದಲ್ಲಿ ೬೦೦ ಕ್ಕೆ ೫೯೧ ಪಡೆದು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಎಲ್ ಅವರು ಕಲಾ ವಿಭಾಗದಲ್ಲಿ ೬೦೦ ಕ್ಕೆ ೫೭೮ ಗಳಿಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ ಎಂಬುದಾಗಿ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟರಾಜು ಸಿ ಅವರು ಮಾಹಿತಿ ನೀಡಿದ್ದಾರೆ.