ಕುಶಾಲನಗರ, ಏ. ೨೧: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕುಶಾಲನಗರ ಮೂಲದ ವಿದ್ಯಾರ್ಥಿನಿ ಅನನ್ಯ ಕೆ.ಎ. ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ೬೦೦ ಅಂಕಗಳಿಗೆ ೬೦೦ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಕುಶಾಲನಗರ ಗುಮ್ಮನಕೊಲ್ಲಿಯ ಮಾರುತಿ ಬಡಾವಣೆ ನಿವಾಸಿ ಮಾಜಿ ಸೈನಿಕ ಅಶೋಕ್ ಕೆ.ಇ. ಹಾಗೂ ಜಿ .ನಳಿನಿ ದಂಪತಿಯ ಪುತ್ರಿಯಾಗಿದ್ದು, ಹಾಸನದ ಬಿ.ಜಿ.ಎಸ್. ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡಿ ಶೇ. ೯೭.೭ ಪಡೆದುಕೊಂಡಿದ್ದರು. ಇದೀಗ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ. ೧೦೦ ಗಳಿಸಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮುಂದೆ ಅವರು ಬಿ.ಕಾಮ್ ನೊಂದಿಗೆ ಅS (ಕಂಪೆನಿ ಸೆಕ್ರೆಟರಿ) ಕೋರ್ಸ್ ಮಾಡುವುದಾಗಿ ನಿಶ್ಚಯಿಸಿದ್ದಾರೆ.

ಉಚಿತ ಪದವಿ ಶಿಕ್ಷಣ - ರೂ. ೩ ಲಕ್ಷ ವಿದ್ಯಾರ್ಥಿ ವೇತನ

ಅನನ್ಯ ಅವರು ೬೦೦ಕ್ಕೆ ೬೦೦ ಪಡೆದು ಕಾಲೇಜಿಗೆ ಕೀರ್ತಿ ತಂದ ಕಾರಣ, ೩ ವರ್ಷ ಬಿ.ಕಾಮ್ ಪದವಿ ಶಿಕ್ಷಣವನ್ನು ಅವರಿಗೆ ಉಚಿತವಾಗಿ ಆಳ್ವಾಸ್ ಪದವಿ ಕಾಲೇಜಿನಲ್ಲಿ ನೀಡುವುದಾಗಿ ಕಾಲೇಜಿನ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದರೊಂದಿಗೆ ರೂ. ೩ ಲಕ್ಷ ವಿದ್ಯಾರ್ಥಿ ವೇತನವನ್ನೂ ನೀಡಲಾಗುವುದು ಹಾಗೂ ಅS (ಕಂಪೆನಿ ಸೆಕ್ರೆಟರಿ) ಕೋರ್ಸ್ ಸಂಬAಧ ಉಚಿತ ತರಬೇತಿ ಕೂಡ ನೀಡಲಾಗುವುದು ಎಂದು ಆಳ್ವಾಸ್ ಆಡಳಿತ ಮಂಡಳಿ ತಿಳಿಸಿದೆ.