ಮಡಿಕೇರಿ, ಏ. ೨೧: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ಫುಟ್ಬಾಲ್ ಹಬ್ಬ ತಾ. ೨೨ ರಿಂದ (ಇಂದಿನಿAದ) ತಾ. ೩೦ರವರೆಗೆ ಮರಗೋಡುವಿನಲ್ಲಿ ಮೇಳೈಸಲಿದೆ. ಪಾಣತ್ತಲೆ ಕುಟುಂಬಸ್ಥರು ನಡೆಸಿಕೊಂಡು ಬರಲಾಗುತ್ತಿರುವ ೨ನೇ ವರ್ಷದ ಈ ಫುಟ್ಬಾಲ್ ಹಬ್ಬದಲ್ಲಿ ಒಟ್ಟು ೬೦ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಗೌಡ ಜನಾಂಗದ ಕುಟುಂಬವಾರು ಫುಟ್ಬಾಲ್ ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಪಂದ್ಯಾವಳಿಯನ್ನು ಪಾಣತ್ತಲೆ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿದ್ದು, ತಾ. ೨೨ ರಿಂದ ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ೫+೩ ಆಟಗಾರರನ್ನೊಳಗೊಂಡ ಒಟ್ಟು ೬೦ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಈಗಾಗಲೇ ಪಂದ್ಯಾವಳಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಂದ್ಯಾವಳಿಯ ಯಶಸ್ಸಿಗಾಗಿ ಕುಟುಂಬಸ್ಥರು ತೊಡಗಿಸಿಕೊಂಡಿದ್ದಾರೆ.
ರೂ. ೧ ಲಕ್ಷ ಬಹುಮಾನ
ನಾಕೌಟ್ ಮಾದರಿಯ ಪಂದ್ಯಾವಳಿ ಇದಾಗಿದ್ದು, ವಿಜೇತರಾಗುವ ತಂಡಗಳಿಗೆ ಭಾರೀ ಬಹುಮಾನ ಕಾದಿದೆ. ಪ್ರಥಮ ಸ್ಥಾನಿ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನಿಗೆ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನಿಗೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ, ಇದಲ್ಲದೆ, ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸುವ ನಾಲ್ಕು ತಂಡಗಳಿಗೆ ತಲಾ ರೂ. ೫ ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದು ಪಂದ್ಯಾವಳಿಯ ಸಂಚಾಲಕ ಪಾಣತ್ತಲೆ ಜಗದೀಶ್ ಮಂದಪ್ಪ ತಿಳಿಸಿದ್ದಾರೆ.
ಕ್ರಿಕೆಟ್ ಆಕರ್ಷಣೆ
ಫುಟ್ಬಾಲ್ ಪಂದ್ಯಾವಳಿಯೊAದಿಗೆ ಇದೇ ಪ್ರಥಮ ಬಾರಿಗೆ ಜಿಲ್ಲೆಯ ವಿವಾಹಿತ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಇದು ಪ್ರಮುಖ ಆಕರ್ಷಣೆಯಾಗಲಿದೆ. ತಾ. ೨೮ ರಂದು ಈ ಪಂದ್ಯಾವಳಿ ನಡೆಯಲಿದ್ದು, ಈಗಾಗಲೇ ನೋಂದಾಯಿಸಿಕೊAಡಿರುವ ೧೬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. -ಸಂತೋಷ್