ಮಡಿಕೇರಿ, ಏ. ೨೧: ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ಒಂಭತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ತಾ. ೨೨ ಮತ್ತು ತಾ. ೨೩ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಮೊದಲ ದಿನ ಪುರುಷರ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಎರಡನೆಯ ದಿನ ಯುವತಿಯರಿಗೆ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ವಿವಿಧ ವಯೋಮಾನದವರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟ ಆಯೋಜನ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಮಿತಿ ಸಂಚಾಲಕ ಐಮಂಡ ಶಬರಿ ನಾಚಪ್ಪ ತಿಳಿಸಿದ್ದಾರೆ.

ಐನ್‌ಮನೆ ಟ್ರೋಫಿ ಆಕರ್ಷಣೆ

ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆಗುವ ತಂಡಕ್ಕೆ ಮರದ ಐನ್‌ಮನೆ ಮಾದರಿಯನ್ನು ಪ್ರಶಸ್ತಿಯನ್ನಾಗಿ ನೀಡಲಾಗುತ್ತದೆ. ಈ ಐನ್‌ಮನೆಯನ್ನು ಈಗಾಗಲೆ ಕೆತ್ತನೆ ಮಾಡಲಾಗಿದ್ದು, ಪಂದ್ಯಾವಳಿ ಉದ್ಘಾಟನೆ ಸಂದರ್ಭ ಅನಾವರಣಗೊಳಿಸಲಾಗುತ್ತದೆ.

ಕ್ರೀಡಾಕೂಟವನ್ನು ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯ ಚಿನ್ನದ ಪದಕ ವಿಜೇತ ಆಲಚಂಡ ಕ್ಯಾಪ್ಟನ್ ಸುಬ್ಬಯ್ಯ ಉದ್ಘಾಟನೆ ಮಾಡಲಿದ್ದಾರೆ. ಐರಿ ಸಮಾಜ ಅಧ್ಯಕ್ಷ ಮೇಲತ್ತಂಡ ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಐರಿ ಸಮಾಜ ನಿರ್ದೇಶಕಿ ಮುಲ್ಲೆöÊರೀರ ಹೇಮಾವತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅರಣ್ಯಾಧಿಕಾರಿಗಳಾದ ಎಸಿಎಫ್ ಐರೀರ ಗೋಪಾಲ, ಆರ್‌ಆಫ್‌ಓ ಮಾಲೇರ ಚರಣ್ ಚಂಗಪ್ಪ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜನಾ ಸಮಿತಿ ತಿಳಿಸಿದೆ.

ಐನ್ ಮನೆ ಟ್ರೋಫಿ -೨೦೨೩ ಕ್ರೀಡಾಕೂಟವನ್ನು ಐರಿಮಕ್ಕಡ ಕೂಟ ಮತ್ತು ಐರಿ ಸಮಾಜ ಅರಮೇರಿ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ.