ಮಡಿಕೇರಿ, ಏ. ೨೦: ವಿಧಾನ ಸಭೆ ಚುನಾವಣೆಗೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಮುಕ್ತಾಯಗೊಂಡಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೨೨ ಅಭ್ಯರ್ಥಿಗಳಿಂದ ೩೧ ನಾಮಪತ್ರಗಳು ಸಲ್ಲಿಕೆಯಾಗಿವೆ. ವೀರಾಜಪೇಟೆ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳಿಂದ ೧೨ ನಾಮಪತ್ರಗಳು ಸಲ್ಲಿಸಲ್ಪಟ್ಟಿದ್ದು, ಒಟ್ಟು ಎರಡು ಕ್ಷೇತ್ರಗಳಲ್ಲಿ ೩೨ ಅಭ್ಯರ್ಥಿಗಳಿಂದ ೪೩ ನಾಮಪತ್ರಗಳು ಸಲ್ಲಿಸಲ್ಪಟ್ಟಿವೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಕೊನೆಯ ದಿನವಾದ ಇಂದು ೧೨ ನಾಮಪತ್ರಗಳು ಸಲ್ಲಿಸಲ್ಪಟ್ಟವು. ತಾ. ೧೫ ರಂದು ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಇಂದು ಮತ್ತೊಂದು ನಾಮಪತ್ರ ಸಲ್ಲಿಸಿದರು. ತಾ. ೧೩ ರಂದು ಎಸ್ಡಿಪಿಐ ಅಭ್ಯರ್ಥಿಯಾಗಿ ಅಮಿನ್ ಮೊಹ್ಸಿನ್ ನಾಮಪತ್ರ ಸಲ್ಲಿಸಿದ್ದು, ಇಂದು ಅದೇ ಪಕ್ಷದಿಂದ ಮತ್ತೋರ್ವ ಅಭ್ಯರ್ಥಿಯಾಗಿ ಕೆ.ಎ. ಉಸ್ಮಾನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಥರ್ಗೌಡ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಬಿಎಸ್ಪಿ ಅಭ್ಯರ್ಥಿ ದಿವಿಲ್ಕುಮಾರ್ ಎರಡು ನಾಮಪತ್ರ ಸಲ್ಲಿಸಿದ್ದಾರೆ.
ಆಮ್ಆದ್ಮಿ ಪಾರ್ಟಿಯ ಕೆ.ಪಿ. ಬೋಪಣ್ಣ ೧, ಜನಸಂಘ ಪಾರ್ಟಿಯಿಂದ ಎ.ಎನ್. ಪದ್ಮನಾಭ ೧ ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್ಎಸ್ ಪಕ್ಷದಿಂದ ಸಜೀರ್ ಮಜೀದ್ ನೆಲಾಟ್, ಸಿಪಿಐ ಪಕ್ಷದಿಂದ ಸೋಮಪ್ಪ, ಕರ್ನಾಟಕ ಪ್ರಜ್ಞಾವಂತ ಪಾರ್ಟಿಯಿಂದ ಬಿ.ಕೆ. ಶ್ರೀನಿವಾಸ್ರೈ, ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ರಶೀದಾ ಬೇಗಂ, ಇವರುಗಳು ತಲಾ ಒಂದೊAದು ನಾಮಪತ್ರ ಸಲ್ಲಿಸಿದ್ದಾರೆ. ಆರ್ಪಿಐ ಪಕ್ಷದಿಂದ ಕೆ.ಬಿ. ರಾಜು ೨ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಹೇಮಂತ್ಕುಮಾರ್ ೨, ಖಲೀಲ್, ಅಶ್ರಫ್, ಪಿ.ಕೆ. ದರ್ಶನ್ ಶೌರಿ, ಹರೀಶ್ ಆಚಾರ್ಯ, ಕೆ.ಎ. ಹಾಶಿಮ್, ವೈ.ಎಂ. ಸಿಂಧು, ಕೆ.ಪಿ. ಶೃತಿ ಇವರುಗಳು ತಲಾ ಒಂದೊAದು, ಮಹಮದ್ ಹನೀಫ್ ೨ ನಾಮಪತ್ರ ಸಲ್ಲಿಸಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೦ ಅಭ್ಯರ್ಥಿಗಳಿಂದ ೧೨ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಒಟ್ಟು ೬ ನಾಮಪತ್ರಗಳು ಸಲ್ಲಿಕೆಯಾಗಿದ್ದು ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣ ಅವರ ಪರವಾಗಿ ವಕ್ತಾರ ಸಂಕೇತ್ ಪೂವಯ್ಯ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು, ಪೊನ್ನಣ್ಣ ಅವರಿಂದ ಒಟ್ಟು ೩ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕೆ.ಜಿ. ಬೋಪಯ್ಯ, ಪಕ್ಷೇತರ ಅಭ್ಯರ್ಥಿಯಾಗಿ ನಾಸರ್ ಮಕ್ಕಿ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಮನ್ಸೂರ್ ಅಲಿ, ಆಮ್ ಆದ್ಮಿ ಪಕ್ಷದಿಂದ ಎಸ್. ರವೀಂದ್ರ ಹಾಗೂ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಕಾಡ್ಯಮಾಡ ಮನು ಸೋಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ದರ್ಶನ್ ಶೌರಿ ಹಾಗೂ ಹೆಚ್.ಪಿ. ಸರೋಜ ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸಜು ವಿ.ಎ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿಯಾಗಿ ಮಸೂದ್ ಫೌಜ್ದಾರ್ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ತಾ.೨೧ ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ತಾ. ೨೪ ಅಂತಿಮ ದಿನವಾಗಿದೆ.