ಕುಶಾಲನಗರ, ಏ. ೨೦: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯಲ್ಲಿ ದುರುಪಯೋಗ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯತಿಯ ಪಿಡಿಓ ಸೇರಿದಂತೆ ಒಟ್ಟು ನಾಲ್ಕು ಮಂದಿ ನೌಕರರಿಗೆ ದಂಡ ವಿಧಿಸಿ ಕೊಡಗು ಜಿಲ್ಲಾ ಪಂಚಾಯಿತಿ ಓಂಬುಡ್ಸ್ಮನ್ ಆದೇಶ ಹೊರಡಿಸಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳ ಪ್ರಕಾಶ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಓಂಬುಡ್ಸ್ಮನ್ ಕಾರ್ಯಾಲಯ ವಿಚಾರಣಾ ವರದಿ ನೀಡಿ ನೌಕರರಿಂದ ತಲಾ ರೂ. ೧೫,೭೯೦ ಜಿಲ್ಲಾ ಪಂಚಾಯಿತಿಯ ಸಂಬAಧಪಟ್ಟ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸೂಚನೆ ನೀಡಲಾಗಿದೆ. ದುರುಪಯೋಗಗೊಂಡ ಹಣ ಫಲಾನುಭವಿಗಳ ಹೆಸರಿನಲ್ಲಿ ಪಾವತಿಸದಂತೆ ನಿರ್ಬಂಧಿಸಲಾಗಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಎಂ.ಕೆ. ಆಯೇಶ, ತಾಲೂಕು ಪಂಚಾಯಿತಿ ತಾಂತ್ರಿಕ ಸಹಾಯಕರಾದ ಕಿಶೋರ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಎನ್. ಜ್ಯೋತಿ, ತಾಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ಕೆ.ಸಿ. ರಂಜಿತ್ ಇವರುಗಳು ದುರುಪಯೋಗವಾದ ಹಣದ ೪೦% ಪಾವತಿಸುವಂತೆ ಸೂಚನೆ ನೀಡಲಾಗಿದೆ.

ಭುವನಗಿರಿ ಕಕ್ಕೆಹೊಳೆ ನಾಲೆಯಿಂದ ಕಸ ವಿಲೇವಾರಿ ಘಟಕದ ತನಕ ೫ ಲಕ್ಷ ರೂ.ಗಳ ಕ್ರಿಯಾಯೋಜನೆಯಲ್ಲಿ ಈ ಕಾಮಗಾರಿ ದುರುಪಯೋಗವಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮಂಗಳ ಪ್ರಕಾಶ್ ನೀಡಿದ ದೂರು ಸಾಬೀತಾದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.

ಈ ಬಗ್ಗೆ ಡಿಸೆಂಬರ್ ೯, ೨೦೨೨ರ ‘ಶಕ್ತಿ’ಯಲ್ಲಿ ಸಮಗ್ರ ತನಿಖಾ ವರದಿ ಪ್ರಕಟವಾಗಿತ್ತು. ನಂತರದ ಬೆಳವಣಿಗೆಯಲ್ಲಿ ದೂರುದಾರರ ಲಿಖಿತ ಹೇಳಿಕೆ, ಗ್ರಾಮಸ್ಥರು ಹಾಗೂ ಪಂಚಾಯಿತಿ ಅಧಿಕಾರಿಗಳಿಂದ, ಸಿಬ್ಬಂದಿಗಳಿAದ ಹೇಳಿಕೆ ಪಡೆಯಲಾಗಿತ್ತು. ಕಾಮಗಾರಿ ನಿರ್ವಹಿಸದಿರುವ ಬಗ್ಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕೂಡ ಪತ್ರ ನೀಡಿದ್ದರು. ಕಾಮಗಾರಿಯಲ್ಲಿ ಜೆಸಿಬಿ ಯಂತ್ರ ಬಳಸಿದ್ದು ಕೆಲವು ಅಧಿಕಾರಿಗಳು ಶಾಸನಬದ್ಧವಾಗಿ ಕರ್ತವ್ಯ ನಿರ್ವಹಿಸಿರುವುದಿಲ್ಲ. ಕಾಮಗಾರಿ ಸ್ಥಳದಲ್ಲಿ ನಾಮಫಲಕ ಅಳವಡಿಸಿರುವುದಿಲ್ಲ.. ಭುವನಗಿರಿ ಕಕ್ಕೆಹೊಳೆ ನಾಲೆಯಿಂದ ಕಸ ವಿಲೇವಾರಿ ಘಟಕದ ತನಕ ಮೊದಲೇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿ ನಡೆದಿತ್ತು. ಕಾಮಗಾರಿಯನ್ನು ಯಂತ್ರ ಬಳಸಿ ನಿಯಮ ಉಲ್ಲಂಘಿಸಿರುವುದು ಕಂಡುಬAದಿದೆ. ಕಾಮಗಾರಿಯ ಉಸ್ತುವಾರಿಯನ್ನು ಯಾವುದೇ ಅಧಿಕಾರಿಗಳು ಕೂಡ ಮೇಲ್ವಿಚಾರಣೆ ಮಾಡಿರುವುದಿಲ್ಲ ಎಂದು ತನಿಖೆಯಿಂದ ದೃಢಪಟ್ಟಿದೆ.

ಹಲವು ಕಾಮಗಾರಿಗಳ ಬಗ್ಗೆ ತನ್ನ ಗಮನಕ್ಕೆ ತಾರದೆ ದುರುಪಯೋಗ ನಡೆದಿರುವ ಬಗೆ ತಾನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾಗಿ ಗ್ರಾ.ಪಂ. ಅಧ್ಯಕ್ಷೆ ಮಂಗಳ ಪ್ರಕಾಶ್ ‘ಶಕ್ತಿ’ಗೆ ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ಬೆಳಕಿಗೆ ತಂದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ತನಗೆ ಅಸಹಕಾರ ನೀಡುತ್ತಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ನಡೆದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಅಳಲನ್ನು ತೋಡಿಕೊಂಡಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ರೀತಿ ಹಲವು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದಾಗಿ ಈಗಾಗಲೇ ಸಂಬAಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಾದ ಕೆ.ಸಿ. ನಂಜುAಡಸ್ವಾಮಿ ತಿಳಿಸಿದ್ದಾರೆ.

-ಚಂದ್ರಮೋಹನ್