ಸಿದ್ದಾಪುರ, ಏ. ೨೦: ಹಾಡಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳೆಗಾರರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂಜಿಲಗೆರೆಯ ಗ್ರಾಮದ ಕೌರಿ ಎಂಬಲ್ಲಿ ನಡೆದಿದೆ.
ಅಮ್ಮತ್ತಿ ಸಮೀಪದ ಕೌರಿ ನಿವಾಸಿಯಾಗಿರುವ ಕಾಫಿ ಬೆಳೆಗಾರ ಉದ್ದಪಂಡ ಚಂಗಪ್ಪ (೪೮) ಎಂಬವರು ಗುರುವಾರ ಬೆಳಿಗ್ಗೆ ೭.೧೫ರ ಸಮಯಕ್ಕೆ ತನ್ನ ಮನೆಯಿಂದ ಕಾಫಿ ತೋಟದತ್ತ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹಠಾತ್ತನೆ ಕಾಡಾನೆಯೊಂದು ಹಿಂಬದಿಯಿAದ ಬಂದು ಚಂಗಪ್ಪ ಅವರನ್ನು ದೂಡಿ ಹಾಕಿ ದಾಳಿ ನಡೆಸಿದೆ.
ಕಾಡಾನೆ ದಾಳಿಗೆ ಸಿಲುಕಿದ ಚಂಗಪ್ಪ ಅವರ ಸೊಂಟಕ್ಕೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ. ಈ ಸಂದರ್ಭದಲ್ಲಿ ದಾಳಿಗೊಳಗಾದ ಚಂಗಪ್ಪ ಕಿರುಚಿಕೊಂಡಾಗ ಅವರ ಕುಟುಂಬದವರು ಕೂಡಲೇ ಬಂದು ಅಮ್ಮತ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಂಭೀರ ಗಾಯಗೊಂಡಿರುವ ಚಂಗಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಮೇಲೆ ಇತ್ತೀಚೆಗೆ ಒಂಟಿ ಸಲಗವೊಂದು ದಾಳಿ ನಡೆಸಲು ಮುಂದಾಗಿತ್ತು. ಕೂದಲೆಳೆಯ ಅಂತರದಿAದ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಸಂಬAಧಿಕರು ತಿಳಿಸಿದ್ದಾರೆ.
ಅಮ್ಮತ್ತಿ ವ್ಯಾಪ್ತಿಯ ಪುಲಿಯೇರಿ, ಇಂಜಿಲಗೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖಾಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆAದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯದೇ ದಿನದೂಡುತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾಮದಲ್ಲಿ ಕಾಡಾನೆ, ಕಾಡುಕೋಣ ಸೇರಿದಂತೆ ವಿವಿಧ ವನ್ಯಜೀವಿಗಳ ಉಪಟಳ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರೊಂದಿಗೆ ಮಾತನಾಡಿದ ಡಿಎಫ್‌ಓ ಶರಣ ಬಸಪ್ಪ ದಾಳಿಗೆ ತುತ್ತಾದ ವ್ಯಕ್ತಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಅರಣ್ಯ ಇಲಾಖೆಯಿಂದ ನೀಡಲಾಗು ತ್ತದೆ ಹಾಗೂ ತೋಟದಲ್ಲಿರುವ ಕಾಡಾನೆಗಳು ಸೇರಿದಂತೆ ವನ್ಯಜೀವಿ ಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಅಮ್ಮತ್ತಿ ಗ್ರಾ.ಪಂ. ಸದಸ್ಯರುಗಳಾದ ಎನ್.ಎಸ್. ಪ್ರಶಾಂತ್, ದಿತಿ ನಾಚಪ್ಪ ಗ್ರಾಮಸ್ಥರಾದ ಉದ್ದಪ್ಪಂಡ ನರು, ಉದ್ದಪ್ಪಂಡ ಜಯ ಸೇರಿದಂತೆ ಇತರರು ಇದ್ದರು.
-ವಾಸು. ಎ.ಎನ್.