ಮಡಿಕೇರಿ, ಏ.೨೧: ಕೊಡಗು ಜಿಲ್ಲಾ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ವೇದಿಕೆಗೆ ಸದಸ್ಯತ್ವ ಹೊಂದಲು ಬಯಸುವವರು ವಿದ್ಯುತ್ ಕ್ಷೇತ್ರದ ಬಗ್ಗೆ ಅನುಭವವುಳ್ಳವರು ಅಥವಾ ಸೂಕ್ತ ಜ್ಞಾನ ಹೊಂದಿರುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿಯನ್ನು ತಾ. ೨೭ ರೊಳಗೆ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ರವರ ಕಚೇರಿ, ಕಾರ್ಯ ಮತ್ತು ಪಾಲನೆ ವಿಭಾಗ ಮಡಿಕೇರಿ, ಇಮೇಲ್ eeemಜಞ@ಛಿesಛಿmಥಿsoಡಿe.oಡಿg, ಛಿesಛಿeemಜಞ @gmಚಿiಟ.ಛಿom ಕಚೇರಿಗೆ ವಿಳಾಸಕ್ಕೆ ವಿವರವನ್ನು ಸಲ್ಲಿಸುವಂತೆ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.