ಕೂಡಿಗೆ, ಏ. ೨೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ - ಕುಶಾಲನಗರ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರ್ಕಾರದಿಂದ ರೂ. ೧೦ ಕೋಟಿ ಬಿಡುಗಡೆಯಾಗಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯೂ ನಡೆದು ಕಾಮಗಾರಿ ಆರಂಭಗೊAಡಿದೆ.

ಈಗಾಗಲೇ ಕೈಗೊಂಡಿರುವ ಕಾಮಗಾರಿಯನ್ನು ಸಂಬAಧಿಸಿದ ಟೆಂಡರ್‌ದಾರ ಮಳೆಗಾಲ ಆರಂಭಕ್ಕೂ ಮುನ್ನ ಪೂರ್ಣ ಗೊಳಿಸುವಂತೆ ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.

ಕುಶಾಲನಗರ-ಹಾರಂಗಿ ರಸ್ತೆಯ ಸ್ವಲ್ಪ ಪ್ರಮಾಣದ ಅಗಲೀಕರಣ ಮತ್ತು ಕೆಲ ಸ್ಥಳಗಳಲ್ಲಿ ನೂತನವಾಗಿ ಮೋರಿಗಳ ನಿರ್ಮಾಣ ಮತ್ತು ಕಾಂಕ್ರಿಟ್ ಅಳವಡಿಕೆ ಸೇರಿದಂತೆ ಸಣ್ಣ ಪ್ರಮಾಣದಲ್ಲಿ ಕಾಮಗಾರಿಗಳು ನಡೆಯುತ್ತಿವೆ.

ಟೆಂಡರ್ ಪ್ರಕ್ರಿಯೆಯಂತೆ ಹಾರಂಗಿಯಿAದ ಕುಶಾಲನಗರದ ವರೆಗಿನ ರಸ್ತೆಯ ಬೀದಿಗಳಲ್ಲಿ ಅಳವಡಿಕೆ ಮಾಡಲಾಗಿರುವ ವಿದ್ಯುತ್ ಕಂಬಗಳ ಮತ್ತು ಅದಕ್ಕೆ ಹೊಂದಿಕೊAಡAತೆ ಇರುವ ಮರಗಳ ತೆರವು ಆಗದ ಕಾರಣ ದಿಂದಾಗಿ ರಸ್ತೆಯ ಕಾಮಗಾರಿಯು ವಿಳಂಬವಾಗುತ್ತಿರುವುದು ಕಂಡು ಬರುತ್ತಿರುವುರಿಂದ ಅವುಗಳ ತೆರವಿಗೆ ಸಂಬAಧಿಸಿದ ಇಲಾಖೆಯವರು ಕ್ರಮ ವಹಿಸಬೇಕಾಗಿದೆ.

ಗುತ್ತಿಗೆದಾರ ರಸ್ತೆಯ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಂಡರೂ ಸಹ ವಿದ್ಯುತ್ ಕಂಬ ಮತ್ತು ಮರಗಳು ತೆರವುಗೊಳ್ಳದ ನೆಪದಲ್ಲಿ ಕಾಮಗಾರಿಯು ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಸಂಬAಧಿಸಿದ ಇಲಾಖೆಯವರು ಕಾಮಗಾರಿಯನ್ನು ತಕ್ಷಣವೇ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹವಾಗಿದೆ.