ಶನಿವಾರಸಂತೆ, ಏ. ೨೦: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬುಧವಾರ ರಾತ್ರಿ ಶನಿವಾರಸಂತೆ ಸಮೀಪದ ಬಿದರೂರು ಗ್ರಾಮದಲ್ಲಿ ನಡೆದಿದೆ.
ರಾತ್ರಿ ೧ ಗಂಟೆಗೆ ಗ್ರಾಮದ ಯತೀಶ್ ಅವರ ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಮನೆಯೊಳಗೆ ಗಾಡ್ರೆಜ್ ತೆಗೆದು ಹುಡುಕಾಟ ನಡೆಸಿದ್ದಾರೆ. ಮನೆ ಮಾಲೀಕ ಯತೀಶ್ ದಂಪತಿ ಮಲಗಿದ್ದ ಕೋಣೆಗೆ ಹೋಗಿ ಅಲ್ಲಿದ್ದ ಗಾಡ್ರೆಜ್ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಶಬ್ದಕ್ಕೆ ಎಚ್ಚೆತ್ತ ದಂಪತಿ ಕೂಗಿಕೊಂಡಾಗ ಕಳ್ಳರು ಪರಾರಿಯಾಗಿದ್ದಾರೆ.
ಈ ಸಂಬAಧ ಯತೀಶ್ ದಂಪತಿ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಗೆ ಸಮೀಪದಲ್ಲೇ ಯತೀಶ್ ಅವರ ಮನೆಯಿದ್ದೂ ಕಳವಿನ ಯತ್ನ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಗುರುವಾರ ಬೆಳಿಗ್ಗೆ ಪರಿಶೀಲನೆ ನಡೆಸಿದ್ದು ಕಳ್ಳರನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.