ಮಡಿಕೇರಿ, ಏ. ೨೦: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗೂಂಡಾ ಕಾಯ್ದೆಯಡಿ ಬಂಧನದಲ್ಲಿರುವ ಅಪರಾಧಿಯ ಶಿಕ್ಷೆಯನ್ನು ಒಂದು ವರ್ಷ ಹೆಚ್ಚುಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಎಂ.ಜಿ. ರಾಜಶೇಖರ್ ಆದೇಶ ಹೊರಡಿಸಿದ್ದಾರೆ. ಸೂರ್ಲಬ್ಬಿಯ ನಿವಾಸಿ ಎಂ. ಭೀಮಯ್ಯ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಪ್ರಸ್ತುತ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆಗೆ ಒಳಪಟ್ಟಿದ್ದು, ಸಲಹಾ ಮಂಡಳಿಯು ‘ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ’ ಎಂದು ಅಭಿಪ್ರಾಯಪಟ್ಟ ಹಿನ್ನೆಲೆ ಭೀಮಯ್ಯರ ಶಿಕ್ಷಾವಧಿ ವಿಸ್ತರಿಸಲಾಗಿದೆ.
ಗೂಂಡಾ ಕಾಯ್ದೆಯ ಪ್ರಕರಣದನ್ವಯ ಕೊಡಗು ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿ ಹೊರಡಿಸಿರುವ ಬಂಧನ ಆದೇಶವನ್ನು ೧೬-೦೩-೨೦೨೩ ರಿಂದ ಒಂದು ವರ್ಷದವರೆÀಗೆ ಮುಂದುವರೆಸಿ ಆದೇಶಿಸಿದ್ದಾರೆ.