ಮಡಿಕೇರಿ, ಏ. ೨೦ : ಮಾರ್ಗೋಲ್ಲಿ ಟಾಟಾ ಎಸ್ಟೇಟ್ ನಲ್ಲಿ ವಾಸವಿರುವ ರಕ್ಷಿತಾ (೨೨) ಎಂಬ ಯುವತಿ ಲಿವರ್ ವೈಫಲ್ಯ ದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ಬೇಕಾಗಿದೆ.

ರಕ್ಷಿತಾ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು. ಕನಿಷ್ಠ ರೂ. ೨೦ ಲಕ್ಷ ವೆಚ್ಚ ತಗುಲಲಿದೆ ಎಂದು ವೈದ್ಯರು ಸೂಚಿಸಿದ್ದಾರೆ. ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿನ್ನೆಲೆ ಕುಟುಂಬ ನೆರವಿನ ಹಸ್ತದ ನಿರೀಕ್ಷೆಯಲ್ಲಿದೆ. ಸಹಾಯ ಮಾಡಲು ಇಚ್ಚಿಸುವವರು ೬೩೬೧೮೬೦೪೬೯, ೭೦೨೨೦೪೯೯೭೭ ಸಂಖ್ಯೆಗಳಿಗೆ ಡಿಜಿಟಲ್ ಪೇಮೆಂಟ್ ಮಾಡಬಹುದು.